ಬೆಂಗಳೂರು : ಸಾರ್ವಜನಿಕರೇ ಗಮನಿಸಿ, ಪೊಲೀಸ್ ಠಾಣೆಯೊಳಗೆ ಮೊಬೈಲ್ ಒಯ್ಯುವುದನ್ನು ತಡೆಯಲು ಯಾವುದೇ ಕಾನೂನಿಲ್ಲ. ಈ ಬಗ್ಗೆ ಆರ್‌ಟಿಐ (RTI) ಅಡಿಯಲ್ಲಿ ಬಹಿರಂಗವಾದ ಮಾಹಿತಿ ಇಲ್ಲಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಪಟ್ಟಂತೆ ಉಲ್ಲೇಖಿತ ಮೇಲ್ಮನವಿ ಪತ್ರದಲ್ಲಿ ತಾವು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಮೊಬೈಲ್ ಫೋನ್ ಅನ್ನು ಪೊಲೀಸ್ ಅಧಿಕಾರಿಗಳ ಕಛೇರಿ ಒಳಗಡೆ ತೆಗೆದುಕೊಂಡು ಹೋಗುವುದನ್ನ ನಿರ್ಬಂದಿಸಿರುವ ಕುರಿತು ಹೊರಡಿಸಲಾದ ಆದೇಶ/ಸಲಹೆ/ನಿರ್ದೇಶನ ಮತ್ತು ಸುತ್ತೋಲೆಗಳ ಪ್ರತಿಗಳನ್ನು ಕೋರಿ ಅರ್ಜಿಯನ್ನು ಸಲ್ಲಿಸಿರುವುದು ಸರಿಯಷ್ಟೇ.
ಈ ಬಗ್ಗೆ ಪರಿಶೀಲಿಸಲಾಗಿ ಸಾರ್ವಜನಿಕರು ಪೊಲೀಸ್ ಅಧಿಕಾರಿಗಣ ಕಛೇರಿ ಒಳಗಡೆ ಮೊಬೈಲ್ ಫೋನ್ ಅನ್ನು ತೆಗೆದುಕೊಂಡು ಹೋಗುವುದನ್ನ ನಿರ್ಬಂದಿಸಿಯಾಗಲಿ ಅಥವಾ ತೆಗೆದುಕೊಂಡು ಹೋಗುವ ಬಗ್ಗೆ ಆದೇಶ/ಮಾರ್ಗದರ್ಶನ/ ನಿರ್ದೇಶನ/ ಸುತ್ತೋಲೆಗಳನ್ನು ಹೊರಡಿಸಿರುವ ಬಗ್ಗೆ ಮಾಹಿತಿ ಲಭ್ಯವಿರುವುದಿಲ್ಲ. ಪರಿಸ್ಥಿತಿಗೆ ಅನುಗುಣವಾಗಿ ಸಂಬಂಧಪಟ್ಟ ಘಟಕಾಧಿಕಾರಿಗಳು ತೆಗೆದುಕೊಳ್ಳುತ್ತಾರೆಂದು ಎಂದು ಈ ಮೂಲಕ ತಿಳಿಸಲಾಗಿದೆ.









