ಬೆಂಗಳೂರು: ನಗರದ ಕುಂದಲಹಳ್ಳಿ ಬಳಿಯ ರಾಮೇಶ್ವರ ಕೆಫೆಯಲ್ಲಿ ನಿನ್ನೆ ಬಾಂಬ್ ಸ್ಪೋಟಗೊಂಡಿತ್ತು. ಈ ಘಟನೆಯಲ್ಲಿ 10 ಮಂದಿ ಗಾಯಗೊಂಡಿದ್ದಾರೆ. ಇಂತಹ ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ನಾವೇ ಭರಿಸುವುದಾಗಿ ಹೋಟೆಲ್ ಮಾಲೀಕ ರಾಘವೇಂದ್ರ ರಾವ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು ಈ ಹಿಂದೆಯೋ ನಮ್ಮ ಹೋಟೆಲ್ ಬಳಿಯಲ್ಲಿ ಅನುಮಾನಾಸ್ಪದ ಬ್ಯಾಗ್ ಬಿಟ್ಟು ಹೋಗಲಾಗಿತ್ತು. ಆಗ ನಾವೇ ಪೊಲೀಸರಿಗೆ ಮಾಹಿತಿ ನೀಡಿದ್ವಿ. ಅದರನ್ನು ಪರಿಶೀಲಿಸಿದಾಗ ಅದರಲ್ಲಿ ಪಂಚೆ, ಶರ್ಟ್ ಬಟ್ಟೆಗಳು ಮಾತ್ರವೇ ಇದ್ದವು ಎಂದರು.
ನಾವು 2012ರಲ್ಲಿ ರಾಮೇಶ್ವರಂ ಕೆಫೆಯಯನ್ನು ಪ್ರಾರಂಭಿಸಲಾಯಿತು. ತಲೆ ತಲಾಂದರದಿಂದ ನಮಗೆ ಕಷ್ಟಗಳು ಬರುತ್ತಿವೆ. ನಾವು ಎಪಿಜೆ ಅಬ್ದುಲ್ ಕಲಾಂ ಹಾದಿಯಲ್ಲಿ ನಡೆಯುವಂತವರು. ಕಲ್ಲುಗಳನ್ನು ಮೆಟ್ಟಿಲುಗಳನ್ನಾಗಿ ಮಾಡಿಕೊಂಡಿದ್ದೇವೆ ಎಂದರು.
ರಾಮೇಶ್ವರಂ ಕೆಫೆ ಪ್ರಾರಂಭಕ್ಕೂ ಮುನ್ನ ಹಲವು ಹೋಟೆಲ್ ನಲ್ಲಿ ಕೆಲಸ ಮಾಡಿದ್ದೇನೆ. ಹೋಟೆಲ್ ನಡೆಸುವಂತವರು ಯಾರು ಈ ರೀತಿ ಕೃತ್ಯ ಎಸಗುವುದಿಲ್ಲ. ಎಲ್ಲಾ ಗಣ್ಯರು ಹಾಗೂ ಪೊಲೀಸರ ಜೊತೆಗೆ ನಾವು ಸೌಹಾರ್ಧತೆಯನ್ನು ಹೊಂದಿದ್ದೇವೆ ಎಂದು ತಿಳಿಸಿದರು.
ನಾನು ಕೋಲಾರದ ಮಾಲೂರಿನ ಹಲದೇವನಹಳ್ಳಿಯವನು. ಕಷ್ಟಗಳನ್ನು ಎದುರಿಸುತ್ತಲೇ ರಾಮೇಶ್ವರಂ ಕೆಫೆ ಪ್ರಾರಂಭಿಸಿದ್ದೇವೆ. ನಿನ್ನೆ ಇಂತಹ ಹೋಟೆಲ್ ನಲ್ಲಿ ಬಾಂಬ್ ಸ್ಪೋಟಗೊಂಡಿದೆ. ಯಾವುದೇ ವ್ಯವಹಾರಿಕ ದ್ವೇಷದಿಂದ ಬಾಂಬ್ ಕೃತ್ಯ ನಡೆದಿಲ್ಲ. ಈ ಸ್ಪೋಟದಲ್ಲಿ ಗಾಯಗೊಂಡಿರುವಂತ ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ನಾವೇ ಭರಿಸುತ್ತೇವೆ ಎಂಬುದಾಗಿ ತಿಳಿಸಿದರು.
BIG NEWS: ಲೋಕಸಭಾ ಚುನಾವಣೆ: ‘ಕರ್ನಾಟಕದ ಕ್ಷೇತ್ರ’ಗಳಿಗೆ ‘ಬಿಜೆಪಿ ಮೊದಲ ಪಟ್ಟಿ’ಯಲ್ಲಿ ಘೋಷಣೆಯಾಗದ ಟಿಕೆಟ್
ಭಾರತದಾದ್ಯಂತ 1.62 ಲಕ್ಷ ಕೋಟಿ ವೆಚ್ಚದ ‘ತೈಲ ಮತ್ತು ಅನಿಲ ಯೋಜನೆ’ಗೆ ಪ್ರಧಾನಿ ಮೋದಿ ಚಾಲನೆ