ಬೆಂಗಳೂರು: ರಾಮೇಶ್ವರ ಕೆಫೆಯಲ್ಲಿ ನಡೆದ ಸ್ಪೋಟದ ಪ್ರಕರಣ ಸಂಬಂದಿಸಿದಂತೆ ನಾನೆಲ್ಲೂ ಹಗುರವಾಗಿ ಮಾತನಾಡಿಲ್ಲ ಎಂಬುದಾಗಿ ಸಚಿವ ಶರಣ ಪ್ರಕಾಶ್ ಪಾಟೀಲ್ ಸ್ಪಷ್ಟ ಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಸರ್ಕಾರ ಪ್ರಕರಣದ ಅರಿತು ಸಿರಿಯಸ್ಸಾದ ಕ್ರಮ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದ್ದೇನೆ, ಹೊರತು ಯಾವ ಪದ ಪ್ರಯೋಗವೂ ಮಾಡಲಿಲ್ಲ, ಮಾಧ್ಯಮ ಮಿತ್ರರೂ ಸಹ ಸ್ಥಳದಲ್ಲಿಯೇ ಇದ್ದರು, ಅವರ ಪ್ರಶ್ನೆ ವಿಷಯಾಂತರವಾಗಿರುವ ಕಾರಣ ನಾನು ಸರ್ಕಾರವು ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಕ್ರಮ ವಹಿಸಲಾಗಿದೆ ಎಂದು ಹೇಳಿದ್ದೇನೆ ಎಂದರು.
ರಾಜ್ಯ ಬಿಜೆಪಿ ಪಕ್ಷ ವಿಧಾನ ಸಭೆ ಚುನಾವಣೆಯಲ್ಲಿ ಸೋತು ಹತಾಶೆಯಾಗಿದೆ. ಕೆಲವೊಂದು ಘಟನೆಗಳನ್ನು ವಿಷಯಾಂತರ ಮಾಡುವುದು ಬಿಜೆಪಿ ಪಕ್ಷ ಮೈಗೂಡಿಸಿಕೊಂಡಿದೆ. ಶಾಂತಿ ಭಂಗ ಮಾಡುವ ಮನಸ್ಥಿತಿಯ ಬಿಜೆಪಿ ಸೌಜನ್ಯವಾಗಿ ನಡೆದುಕೊಳ್ಳಲಿ ಎಂದು ತಿಳಿಸಿದರು.
ಮಂಡ್ಯ ಬಿಜೆಪಿ-ಜೆಡಿಎಸ್ ಮೈತ್ರಿ ಟಿಕೆಟ್ 100% ನನಗೆ ಸಿಗುತ್ತೆ: ಸುಮಲತಾ ಅಂಬರೀಶ್ ವಿಶ್ವಾಸ!