Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯಸಭಾ ಚುನಾವಣೆ 2026: ಬಿಹಾರದಲ್ಲಿ ಎನ್‌ಡಿಎ ಕ್ಲೀನ್ ಸ್ವೀಪ್; ಒಡಿಶಾ ಮತ್ತು ಹರಿಯಾಣದ ವಿಜೇತರ ಪೂರ್ಣ ಪಟ್ಟಿ ಇಲ್ಲಿದೆ

17/03/2026 10:29 AM

BREAKING : ಕರವೇ ಹೋರಾಟಕ್ಕೆ ಮಣಿದ ರೈಲ್ವೆ ಇಲಾಖೆ : ಇಂದು ನಡೆಯಬೇಕಿದ್ದ ಪರೀಕ್ಷೆಗಳು ಮುಂದೂಡಿಕೆ!

17/03/2026 10:28 AM

ಮೊದಲು ಹಣ ಪಾವತಿಸಿ, ಆಮೇಲೆ ತೈಲ ಪಡೆಯಿರಿ: ಪೆಟ್ರೋಲ್ ಬಂಕ್‌ಗಳಿಗೆ ನೀಡುತ್ತಿದ್ದ ‘ಸಾಲದ ಸೌಲಭ್ಯ’ ರದ್ದುಗೊಳಿಸಿದ ಕಂಪನಿಗಳು

17/03/2026 10:21 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನೇಮಕಾತಿ ಪ್ರಕ್ರಿಯೆಯಲ್ಲಿ ವಿಶ್ವವಿದ್ಯಾಲಯವನ್ನೇ ಘಟಕವಾಗಿಸಲು ಸಂಪುಟ ಉಪಸಮಿತಿ ನಿರ್ಧಾರ : ಡಾ.ಹೆಚ್ ಸಿ ಮಹದೇವಪ್ಪ
KARNATAKA

ನೇಮಕಾತಿ ಪ್ರಕ್ರಿಯೆಯಲ್ಲಿ ವಿಶ್ವವಿದ್ಯಾಲಯವನ್ನೇ ಘಟಕವಾಗಿಸಲು ಸಂಪುಟ ಉಪಸಮಿತಿ ನಿರ್ಧಾರ : ಡಾ.ಹೆಚ್ ಸಿ ಮಹದೇವಪ್ಪ

By kannadanewsnow5719/02/2026 6:04 AM

ಬೆಂಗಳೂರು : ಸಾಮಾಜಿಕ ನ್ಯಾಯವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಹತ್ತಾರು ಭಿನ್ನ ಅಭಿಪ್ರಾಯಗಳು ಬಲವಾಗಿ ಅಸ್ತಿತ್ವದಲ್ಲಿ ಇರುವ ಸಂದರ್ಭದಲ್ಲೇ ನಮ್ಮ ಸರ್ಕಾರವು ಸುಪ್ರಿಂ ಕೋರ್ಟ್ ನ ಆದೇಶಕ್ಕೆ ಅನ್ವಯವಾಗಿ ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಸಮುದಾಯಗಳಿಗೆ ಒಳ‌ ಮೀಸಲಾತಿಯನ್ನು ಕಲ್ಪಿಸುವ ಕೆಲಸವನ್ನು ‌ಮಾಡಿದೆ ಎಂದು ಸಚಿವ ಡಾ.ಹೆಚ್ ಸಿ ಮಹದೇವಪ್ಪ ಹೇಳಿದ್ದಾರೆ. 

101 ಪರಿಶಿಷ್ಟ ಸಮುದಾಯಗಳನ್ನು ABC ಎಂದು ವರ್ಗೀಕರಿಸಿ ಒಳ ಮೀಸಲಾತಿಯನ್ನು ಹಂಚಿಕೆ ಮಾಡಿದ ನಂತರದಲ್ಲಿ ಇನ್ನಷ್ಟು ತಾಂತ್ರಿಕ ಸವಾಲುಗಳು ಎದುರಾಗಿದ್ದು, ಈ ಬಗ್ಗೆ ವಿವಿಧ ಪರಿಶಿಷ್ಟ ಜಾತಿಯ ಯುವಕರು ಮತ್ತು ತಜ್ಞರು ನಿಯಮಿತವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಲೇ ಇದ್ದರೆ, ಮತ್ತೆ ಕೆಲವರು ರಾಜಕೀಯ ಪ್ರೇರಿತವಾಗಿ ಪರಿಶಿಷ್ಟ ಸಮುದಾಯಗಳ ನಡುವೆ ಒಡಕು ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

ಆದರೆ ನ್ಯಾಯದ ಪ್ರಶ್ನೆ ಬಂದಾಗ, ಸಮಚಿತ್ತವಾಗಿ ಎಲ್ಲವನ್ನೂ ಕೇಳಿ, ಪರಾಮರ್ಶಿಸಿ, ನ್ಯಾಯವನ್ನು ನಿರ್ಧರಿಸಬೇಕಾದ್ದು ಯಾವುದೇ ಜನಪ್ರತಿನಿಧಿಯ ಕರ್ತವ್ಯ ಆಗಿರುತ್ತದೆ ಎಂಬ ಸಂಗತಿಯನ್ನು ನಾನು ಸದಾ ನಂಬುತ್ತೇನೆ.

ಈ ಹಿನ್ನಲೆಯಲ್ಲಿ ವಿಶ್ವವಿದ್ಯಾಲಯದ ನೇಮಕಾತಿಯ ವಿಷಯದಲ್ಲಿ ಪರಿಶಿಷ್ಟ ಜಾತಿ ಸಮುದಾಯದ ಹಲವು ವಿದ್ಯಾರ್ಥಿಗಳು ಮತ್ತು ಯುವಕರು ಎತ್ತಿರುವ ತಾಂತ್ರಿಕ ಸವಾಲುಗಳು ನ್ಯಾಯಯುತವಾಗಿದ್ದು, ಒಳ ಮೀಸಲಾತಿಯ ಸಂದರ್ಭದಲ್ಲಿ ಆಗುತ್ತಿರುವ ತೊಂದರೆಗಳನ್ನು ವಿವರಿಸಿದೆ.

ಸಮಸ್ಯೆ ಏನು?

ಈಗ ಒಳ ಮೀಸಲಾತಿ ಹಂಚಿಕೆಯಲ್ಲಿ ABC ಎಂದು ವಿಭಾಗ ಮಾಡಿ, ಮೀಸಲಾತಿ ಪ್ರಮಾಣವನ್ನು ಹಂಚಿಕೆ ಮಾಡಲಾಗಿದ್ದು, ವಿಶ್ವವಿದ್ಯಾಲಯದಲ್ಲಿ ಪ್ರಸ್ತುತ ಇರುವ ವಿಷಯ ವಿಭಾಗವಾರು( Department wise recruitment) ನೇಮಕಾತಿ ಸಂದರ್ಭದಲ್ಲಿ, ಒಂದೊಂದೇ ಹುದ್ದೆಗಳು ಇರುವೆಡೆ ಕೇವಲ ಒಳ ಮೀಸಲಾತಿ ಗುಂಪಿನ A ವರ್ಗಕ್ಕೆ ಮಾತ್ರವೇ ಉದ್ಯೋಗ ದೊರೆತು, ಮಿಕ್ಕ ಎರಡೂ ವರ್ಗವು ಅವಕಾಶದಿಂದ ವಂಚಿತರಾಗುತ್ತಾರೆ.

ಹೀಗಾಗಿ ನ್ಯಾಯ ಹಂಚಿಕೆಯಲ್ಲಿ ಎಲ್ಲರನ್ನೂ ಒಳಗೊಳ್ಳಬೇಕು ಎಂದು ಹಂಚಿಕೆ ಮಾಡಲಾಗಿರುವ ಒಳ ಮೀಸಲಾತಿಯ ಮೂಲ ಆಶಯಕ್ಕೇ ಇಲ್ಲಿ ಧಕ್ಕೆ ಆಗುತ್ತಿದ್ದು ಇದನ್ನು ಸರಿಪಡಿಸಬೇಕೆಂಬುದು B ಮತ್ತು C ವರ್ಗದಲ್ಲಿರುವ ಪರಿಶಿಷ್ಟ ಜಾತಿ ಸಮುದಾಯದ ಬೇಡಿಕೆ ಆಗಿದೆ.

ಈ ಹಿನ್ನಲೆಯಲ್ಲಿ ನೇಮಕಾತಿ ವಿಷಯದಲ್ಲಿ ವಿಶ್ವವಿದ್ಯಾಲಯವನ್ನೇ ಒಂದು ಘಟಕವನ್ನಾಗಿ ಪರಿಗಣಿಸಿದರೆ, ಆಗ ಮೂರೂ ವರ್ಗಗಳಿಗೂ ಕೂಡಾ ಅವಕಾಶ ದೊರೆಯುತ್ತದೆ ಎಂಬುದು ಪರಿಶಿಷ್ಟ ಸಮುದಾಯಗಳ ಬೇಡಿಕೆ ಆಗಿದ್ದು, ಅದು ನ್ಯಾಯ ಸಮ್ಮತವೂ ಆಗಿದೆ. ಹೀಗಾಗಿ ಸಂಪುಟ ಉಪ ಸಮಿತಿ ಸಭೆಯಲ್ಲಿ ಪರಿಶಿಷ್ಟ ಜನರ ಉದ್ಯೋಗ ಭವಿಷ್ಯಕ್ಕೆ ನ್ಯಾಯಯುತವಾಗಿ ಅನುಕೂಲ ಆಗುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯವನ್ನು ಘಟಕವಾಗಿಸುವ ಬಗ್ಗೆ ತಾತ್ವಿಕವಾಗಿ ಒಪ್ಪಿಕೊಳ್ಳಲಾಗಿದ್ದು, ಇದಕ್ಕೆ ಸಂಬಂಧಿಸಿದ ನಿಯಮಾವಳಿಗಳ ರೂಪುರೇಷೆಯನ್ನು ಶೀಘ್ರದಲ್ಲೇ ಸಿದ್ಧಪಡಿಸಲಾಗುವುದು.

ಸಮಾನವಾದ ನ್ಯಾಯ ಹಂಚಿಕೆಗೆ ಪರ್ಯಾಯ ಇಲ್ಲದ ಕಾರಣದಿಂದ ಇದೇ ಮಾರ್ಗದ ಅನುಸರಣೆಯು ಸೂಕ್ತವಾಗಿದ್ದು ಯಾರಿಗೂ ತೊಂದರೆ ಆಗದಂತೆ ಪರಿಶಿಷ್ಟ ಸಮುದಾಯಗಳ ಸಮಾನ  ನ್ಯಾಯ ಹಂಚಿಕೆಗೆ ಸರ್ಕಾರ ಬದ್ಧವಾಗಿದೆ ಎಂದು ಈ ಮೂಲಕ ತಿಳಿಸಿದ್ದಾರೆ.

Cabinet subcommittee decides to make the university a unit in the recruitment process: Dr. H. C. Mahadevappa
Share. Facebook Twitter LinkedIn WhatsApp Email

Related Posts

BREAKING : ಕರವೇ ಹೋರಾಟಕ್ಕೆ ಮಣಿದ ರೈಲ್ವೆ ಇಲಾಖೆ : ಇಂದು ನಡೆಯಬೇಕಿದ್ದ ಪರೀಕ್ಷೆಗಳು ಮುಂದೂಡಿಕೆ!

17/03/2026 10:28 AM1 Min Read

BREAKING : ರಾಜ್ಯದಲ್ಲಿ ಘೋರ ದುರಂತ : 50 ಅಡಿ ಆಳದ ಬಾವಿಗೆ ಬಿದ್ದ 2 ವರ್ಷದ ಮಗು, ತನ್ನ ಪ್ರಾಣ ಲೆಕ್ಕಿಸದೆ ರಕ್ಷಿಸಿದ ವ್ಯಕ್ತಿ!

17/03/2026 10:21 AM1 Min Read

ALERT : ಟಾಯ್ಲೆಟ್ ಗೆ `ಮೊಬೈಲ್’ ತೆಗೆದುಕೊಂಡು ಹೋಗುವವರೇ ಎಚ್ಚರ : ಈ ಭಯಾನಕ ಕಾಯಿಲೆ ಬರುವುದು ಗ್ಯಾರಂಟಿ !

17/03/2026 10:14 AM2 Mins Read
Recent News

ರಾಜ್ಯಸಭಾ ಚುನಾವಣೆ 2026: ಬಿಹಾರದಲ್ಲಿ ಎನ್‌ಡಿಎ ಕ್ಲೀನ್ ಸ್ವೀಪ್; ಒಡಿಶಾ ಮತ್ತು ಹರಿಯಾಣದ ವಿಜೇತರ ಪೂರ್ಣ ಪಟ್ಟಿ ಇಲ್ಲಿದೆ

17/03/2026 10:29 AM

BREAKING : ಕರವೇ ಹೋರಾಟಕ್ಕೆ ಮಣಿದ ರೈಲ್ವೆ ಇಲಾಖೆ : ಇಂದು ನಡೆಯಬೇಕಿದ್ದ ಪರೀಕ್ಷೆಗಳು ಮುಂದೂಡಿಕೆ!

17/03/2026 10:28 AM

ಮೊದಲು ಹಣ ಪಾವತಿಸಿ, ಆಮೇಲೆ ತೈಲ ಪಡೆಯಿರಿ: ಪೆಟ್ರೋಲ್ ಬಂಕ್‌ಗಳಿಗೆ ನೀಡುತ್ತಿದ್ದ ‘ಸಾಲದ ಸೌಲಭ್ಯ’ ರದ್ದುಗೊಳಿಸಿದ ಕಂಪನಿಗಳು

17/03/2026 10:21 AM

BREAKING : ರಾಜ್ಯದಲ್ಲಿ ಘೋರ ದುರಂತ : 50 ಅಡಿ ಆಳದ ಬಾವಿಗೆ ಬಿದ್ದ 2 ವರ್ಷದ ಮಗು, ತನ್ನ ಪ್ರಾಣ ಲೆಕ್ಕಿಸದೆ ರಕ್ಷಿಸಿದ ವ್ಯಕ್ತಿ!

17/03/2026 10:21 AM
State News
KARNATAKA

BREAKING : ಕರವೇ ಹೋರಾಟಕ್ಕೆ ಮಣಿದ ರೈಲ್ವೆ ಇಲಾಖೆ : ಇಂದು ನಡೆಯಬೇಕಿದ್ದ ಪರೀಕ್ಷೆಗಳು ಮುಂದೂಡಿಕೆ!

By kannadanewsnow0517/03/2026 10:28 AM KARNATAKA 1 Min Read

ಹುಬ್ಬಳ್ಳಿ : ರೈಲ್ವೆ ಇಲಾಖೆ ಮುಂಬಡ್ತಿ ಪರೀಕ್ಷೆಯಲ್ಲಿ ಕನ್ನಡಿಗರಿಗೆ ಅನ್ಯಾಯ ಹಿನ್ನೆಲೆಯಲ್ಲಿ, ಗೂಡ್ಸ್ ರೈಲ್ವೆ ಮ್ಯಾನೇಜರ್ ಮತ್ತು ಎಲ್‌ಡಿಸಿ ಹುದ್ದೆಗಳ…

BREAKING : ರಾಜ್ಯದಲ್ಲಿ ಘೋರ ದುರಂತ : 50 ಅಡಿ ಆಳದ ಬಾವಿಗೆ ಬಿದ್ದ 2 ವರ್ಷದ ಮಗು, ತನ್ನ ಪ್ರಾಣ ಲೆಕ್ಕಿಸದೆ ರಕ್ಷಿಸಿದ ವ್ಯಕ್ತಿ!

17/03/2026 10:21 AM

ALERT : ಟಾಯ್ಲೆಟ್ ಗೆ `ಮೊಬೈಲ್’ ತೆಗೆದುಕೊಂಡು ಹೋಗುವವರೇ ಎಚ್ಚರ : ಈ ಭಯಾನಕ ಕಾಯಿಲೆ ಬರುವುದು ಗ್ಯಾರಂಟಿ !

17/03/2026 10:14 AM

BIG NEWS : ರೈಲ್ವೆ ನೇಮಕಾತಿಯಲ್ಲಿ ಕನ್ನಡ ಭಾಷೆಗೆ ಕೊಕ್ : ಹುಬ್ಬಳ್ಳಿ ವಿಭಾಗೀಯ ಕಚೇರಿಗೆ ಕರವೇ ಮುತ್ತಿಗೆ!

17/03/2026 10:11 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.