ನವದೆಹಲಿ: ಪ್ರಸಕ್ತ 2025-26ರ ಹಿಂಗಾರು ಋತುವಿನಲ್ಲಿ ರಂಜಕ ಮತ್ತು ಪೊಟ್ಯಾಸಿಕ್ ರಸಗೊಬ್ಬರಗಳಿಗೆ 37,952 ಕೋಟಿ ರೂ.ಗಳ ಸಬ್ಸಿಡಿಯನ್ನು ಕ್ಯಾಬಿನೆಟ್ ಮಂಗಳವಾರ ಅನುಮೋದಿಸಿದೆ
ಪ್ರಸಕ್ತ ಹಿಂಗಾರು ಋತುವಿನಲ್ಲಿ ಸಾರಜನಕಕ್ಕೆ ಪ್ರತಿ ಕೆ.ಜಿ.ಗೆ 43.02 ರೂ., ರಂಜಕ (ಪಿ) ಕೆ.ಜಿ.ಗೆ 47.96 ರೂ., ಪೊಟ್ಯಾಶ್ (ಕೆ) ಗೆ 2.38 ರೂ., ಸಲ್ಫರ್ (ಎಸ್) ಗೆ 2.87 ರೂ. ಸಬ್ಸಿಡಿ ಆಗಿದೆ.
2025 ರ ಹಿಂಗಾರು ಹಂಗಾಮಿಗೆ ಅನುಮೋದಿಸಲಾದ ಸಬ್ಸಿಡಿ ಹಿಂದಿನ ವರ್ಷಕ್ಕಿಂತ ಸುಮಾರು 14,000 ಕೋಟಿ ರೂ.ಗಳಷ್ಟು ಹೆಚ್ಚಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವನಿ ವೈಷ್ಣವ್ ಸುದ್ದಿಗಾರರಿಗೆ ತಿಳಿಸಿದರು.
ಆಮದು ಬೆಲೆ ಮತ್ತು ಪೋಷಕಾಂಶಗಳ ಅವಶ್ಯಕತೆ, ಸಬ್ಸಿಡಿ ಹೊರೆ ಮತ್ತು ಎಂಆರ್ಪಿ ಮುಂತಾದ ಇತರ ಅಂಶಗಳನ್ನು ಪರಿಗಣಿಸಿ ಪೋಷಕಾಂಶ ಆಧಾರಿತ ಸಬ್ಸಿಡಿ (ಎನ್ಬಿಎಸ್) ಯೋಜನೆಯಡಿ ಸಬ್ಸಿಡಿ ದರವನ್ನು ನಿಗದಿಪಡಿಸಲಾಗಿದೆ ಎಂದು ಅವರು ಹೇಳಿದರು.
ಸಬ್ಸಿಡಿ ದರಗಳು ಅಕ್ಟೋಬರ್ ೧ ರಿಂದ ಅನ್ವಯವಾಗುತ್ತವೆ.
ದೇಶದ ಅನೇಕ ಭಾಗಗಳಲ್ಲಿ ಹಿಂಗಾರು (ಚಳಿಗಾಲ) ಬಿತ್ತನೆ ಪ್ರಾರಂಭವಾಗಿದೆ. ಗೋಧಿ, ಸಾಸಿವೆ ಮತ್ತು ಕಡಲೆಕಾಳುಗಳು ಈ ಋತುವಿನಲ್ಲಿ ಬೆಳೆಯುವ ಪ್ರಮುಖ ಬೆಳೆಗಳಾಗಿವೆ








