ಬೆಂಗಳೂರು: ಕನ್ನಡಿಗ ಚಾಲಕರಿಗೆ ಡ್ಯೂಟಿ ನೀಡದೇ ಬ್ಲಾಕ್ ಮಾಡಿ, ಬೇರೆ ರಾಜ್ಯದವರಿಗೆ ಅವಕಾಶ ನೀಡುತ್ತಿರುವುದನ್ನು ಖಂಡಿಸಿ, ಬೆಂಗಳೂರಲ್ಲಿ ಉಬರ್ ಕಚೇರಿ ಮುಂದೆ ಚಾಲಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೇ ಕಚೇರಿ ಸೆಟರ್ ಮುರಿದು ಒಳ ನುಗ್ಗೋದಕ್ಕೂ ಯತ್ನಿಸಿದ್ದಾರೆ.
ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿರುವಂತ ಉಬರ್ ಕಚೇರಿಯ ಮುಂದೆ ಕನ್ನಡಿಗ ಚಾಲಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೇ ಕಚೇರಿ ಶೆಟರ್ ಮುಚ್ಚಿದ್ದರಿಂದ ಆಕ್ರೋಶಗೊಂಡ ಕ್ಯಾಬ್ ಚಾಲಕರು ಮುರಿದು ಒಳ ನುಗ್ಗೋದಕ್ಕೂ ಯತ್ನಿಸಿದಂತ ಘಟನೆ ನಡೆದಿದೆ.
ಅಂದಹಾಗೇ ಕನ್ನಡಿಗ ಚಾಲಕರಿಗೆ ಡ್ಯೂಟಿ ನೀಡಿದೇ ಬಾಂಗ್ಲ ಹಾಗೂ ಬೇರೆ ರಾಜ್ಯಗಳ ಚಾಲಕರಿಗೆ ಉಬರ್ ಕಂಪನಿಯಿಂದ ಡ್ಯೂಟಿ ನೀಡಲಾಗಿತ್ತಂತೆ. ಕನ್ನಡಿಗ ಚಾಲಕರನ್ನು ಬ್ಲಾಕ್ ಮಾಡಿದ್ದಕ್ಕೆ ಸಿಡಿದೆದ್ದು ಪ್ರತಿಭಟನೆ ನಡೆಸುತ್ತಿದ್ದಾರೆ.
‘AI’ ಕಾಲಘಟ್ಟದಲ್ಲಿ ಸುದ್ದಿ, ಚಿತ್ರಗಳ ನೈಜತೆ ಖಾತ್ರಿ ಅಗತ್ಯ: ಸಚಿವ ಈಶ್ವರ ಖಂಡ್ರೆ
Health Tips: ಫ್ರಿಡ್ಜ್‌ನಲ್ಲಿಟ್ಟ ಹಿಟ್ಟನ್ನು ಬಳಸುವುದು ಸುರಕ್ಷಿತವೇ ?








