ಬೆಂಗಳೂರು: ರಾಜ್ಯದ 10 ವಿಭಾಗಗಳಿಗೆ ಬಿಜೆಪಿಯಿಂದ ಪ್ರಭಾರಿಗಳು ಹಾಗೂ ಸಹ ಪ್ರಭಾರಿಗಳನ್ನು ನೇಮಕ ಮಾಡಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆದೇಶಿಸಿದ್ದಾರೆ.
ಇಂದು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಅವರು, ಈ ಕೆಳಕಂಡ ಪ್ರಮುಖರನ್ನು ಪಕ್ಷದ 10 ವಿಭಾಗಗಳಿಗೆ ಪ್ರಭಾರಿಗಳು ಹಾಗೂ ಸಹ-ಪ್ರಭಾರಿಗಳನ್ನಾಗಿ ನಿಯುಕ್ತಿ ಮಾಡಲಾಗಿದೆ ಎಂಬುದಾಗಿ ತಿಳಿಸಿದ್ದಾರೆ.
ಹೀಗಿದೆ 10 ವಿಭಾಗಗಳ ಪ್ರಭಾರಿ, ಸಹ ಪ್ರಭಾರಿಗಳ ಪಟ್ಟಿ
- ಮೈಸೂರು – ಸ್ವಾಮಿ ಮರುಳಾಪುರ ಅವರನ್ನು ಪ್ರಭಾರಿಯಾಗಿ, ಇ.ಸಿ ನಿಂಗರಾಜುಗೌಡ ಅವರನ್ನು ಸಹ-ಪ್ರಭಾರಿಗಳನ್ನಾಗಿ ನೇಮಕ ಮಾಡಲಾಗಿದೆ.
- ಮಂಗಳೂರು- ಬಿ.ಬಿ ಭಾರತೀಶ್ ಅವರನ್ನು ಪ್ರಭಾರಿ, ಜಯಂತ್ ಕೋಟ್ಯಾನ್ ಅವರನ್ನು ಸಹ-ಪ್ರಭಾರಿಯನ್ನಾಗಿ ನೇಮಕ ಮಾಡಲಾಗಿದೆ.
- ಶಿವಮೊಗ್ಗ- ಆರ್.ಕೆ ಸಿದ್ರಾಮಣ್ಣ ಅವರನ್ನು ಪ್ರಭಾರಿ, ಆರ್.ಡಿ ಹೆಗಡೆ ಸಹ ಪ್ರಭಾರಿಯಾಗಿ ನೇಮಿಸಲಾಗಿದೆ.
- ಧಾರವಾಡ- ಜಯತೀರ್ಥ ಕಟ್ಟಿ ಅವರನ್ನು ಪ್ರಭಾರಿ, ಭೋಜರಾಜ ಕರೂದಿ ಅವರನ್ನು ಸಹ ಪ್ರಭಾರಿಯಾಗಿ ನೇಮಕ ಮಾಡಲಾಗಿದೆ.
- ಬೆಳಗಾವಿ- ಸಂಜಯ್ ಪಾಟೀಲ್ ಅವರನ್ನು ಪ್ರಭಾರಿ, ಬಸವರಾಜ ಯಂಕಂಚಿ ಅವರನ್ನು ಸಹ ಪ್ರಭಾರಿಯಾಗಿ ನೇಮಿಸಲಾಗಿದೆ.
- ಕಲಬುರ್ಗಿ- ಅರುಣ್ ಶಹಾಪುರ ಅವರನ್ನು ಪ್ರಭಾರಿ, ಶರಣಪ್ಪ ತಳವಾರ ಅವರನ್ನು ಸಹ ಪ್ರಭಾರಿಯಾಗಿ ನೇಮಕ ಮಾಡಲಾಗಿದೆ.
- ಬಳ್ಳಾರಿ- ಅಮರನಾಥ ಪಾಟೀಲ್ ಅವರನ್ನು ಪ್ರಭಾರಿ, ಚನ್ನಬಸನಗೌಡ ಪಾಟೀಲ್ ಅವರನ್ನು ಸಹ ಪ್ರಭಾರಿಯಾಗಿ ನಿಯುಕ್ತಿಗೊಳಿಸಲಾಗಿದೆ.
- ದಾವಣಗೆರೆ- ಶಿವಮೊಗ್ಗದ ಜಿಲ್ಲಾ ನಿಕಟಪೂರ್ ಅಧ್ಯಕ್ಷ ಟಿ.ಡಿ ಮೇಘರಾಜ್ ಅವರನ್ನು ಪ್ರಭಾರಿಗಳಾಗಿ, ಎ ಮುರಳಿ ಅವರನ್ನ ಸಹ-ಪ್ರಭಾರಿಗಳನ್ನಾಗಿ ನಿಯುಕ್ತಿ ಗೊಳಿಸಲಾಗಿದೆ.
- ಬೆಂಗಳೂರು ಗ್ರಾಮಾಂತರ – ಬ್ಯಾಟರಂಗೇಗೌಡ ಅವರನ್ನು ಪ್ರಭಾರಿಯಾಗಿ, ಎಂ.ಕೆ ವಾಸುದೇವ್ ಅವರನ್ನು ಸಹ ಪ್ರಭಾರಿಯನ್ನಾಗಿ ನೇಮಕ ಮಾಡಲಾಗಿದೆ.
- ಬೆಂಗಳೂರು – ಎಸ್ ಎನ್ ರಾಜಣ್ಣ ಅವರನ್ನು ಪ್ರಭಾರಿಗಳಾಗಿ, ಕಿರಣ್ ಬಾಬು, ಚಂದ್ರಶೇಖರ ರಾಜು ಅವರನ್ನು ಸಹ ಪ್ರಭಾರಿಯನ್ನಾಗಿ ನೇಮಕ ಮಾಡಲಾಗಿದೆ.

SHOCKING : ರಾಜ್ಯದಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿ : ಪಾಠ ಮಾಡುವಾಗಲೇ ಕುಸಿದು ಬಿದ್ದು ಶಿಕ್ಷಕ ಸಾವು!
BREAKING : ಪವಿತ್ರಾಗೌಡಗೆ ಮತ್ತೆ ಶಾಕ್ : ಮನೆ ಊಟ ಆದೇಶ ರದ್ದುಗೊಳಿಸಿದ ಹೈಕೋರ್ಟ್!








