ಬೆಂಗಳೂರು: ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಜಿಲ್ಲಾ ಉಸ್ತುವಾರಿಗಳನ್ನು ನೇಮಕ ಮಾಡಲಾಗಿತ್ತು. ಅಲ್ಲದೇ ರಾಜ್ಯ ಉಸ್ತುವಾರಿ, ಸಹ ಉಸ್ತುವಾರಿಯನ್ನು ನೇಮಕ ಮಾಡಲಾಗಿತ್ತು. ಈ ಬೆನ್ನಲ್ಲೇ ಲೋಕಸಭಾ ಚುನಾವಣೆಗೆ ತಯಾರಿ ನಡೆಸೋದಕ್ಕಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ನಾಳೆ ನಾಡಿದ್ದು ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.
ಕರ್ನಾಟಕ ಬಿಜೆಪಿಯಿಂದ ಬಿಜೆಪಿ ರಾಜ್ಯಾಧ್ಯಕ್ಷ ಪ್ರವಾಸದ ವಿವರವನ್ನು ಬಿಡುಗಡೆ ಮಾಡಲಾಗಿದೆ. ದಿನಾಂಕ 28-01-2024ರಂದು ಬೆಳಿಗ್ಗೆ 9 ಗಂಟೆಗೆ ಮಂತ್ರಾಲಯಕ್ಕೆ ಭೇಟಿ ನೀಡಲಿದ್ದಾರೆ. ಆ ನಂತ್ರ 12 ಗಂಟೆಯವರೆಗೆ ರಾಯಚೂರಿನ ಜಿಲ್ಲಾ ಕಾರ್ಯಾಲಯದಲ್ಲಿ ಮನ್ ಕಿ ಬಾತ್ ವೀಕ್ಷಣೆ ಮಾಡಲಿದ್ದಾರೆ.
ಸಂಜೆ 5.30ರ ಹಾಗೆ ಯಾದಗಿರಿ ತಲುಪಿ ಪತ್ರಿಕಾಗೋಷ್ಠಿ, ಕಾರ್ಯಕರ್ತರ ಸಭೆ, ಬೂತ್ ಅಧ್ಯಕ್ಷರ ಮನೆಗೆ ಭೇಟಿಯನ್ನು ನೀಡಿ, ಅಲ್ಲಿಂದ ಸಂಜೆ 7.30ಕ್ಕೆ ರಸ್ತೆ ಮಾರ್ಗದ ಮೂಲಕ ಕಲಬುರ್ಗಿಯನ್ನು ತಲುಪಿ, ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ.
ದಿನಾಂಕ 29-01-2024ರಂದು ಕಲಬುರ್ಗಿಯಿಂದ ರಸ್ತೆ ಮಾರ್ಗದ ಮೂಲಕ ಬೆಳಿಗ್ಗೆ 10.30ಕ್ಕೆ ಬೀದರ್ ತಲುಪಲಿದ್ದಾರೆ. ಬೆಳಿಗ್ಗೆ 10.30ರಿಂದ 2 ಗಂಟೆಯ ಅವಧಿಯಲ್ಲಿ ಬೂತ್ ಅಧ್ಯಕ್ಷರ ಮನೆ ಬೇಟಿ, ಚಿಟ್ಟವಾಡಿ ಗ್ರಾಮದ ಬಸವೇಶ್ವರ ಪುತ್ಥಳಿ ಲೋಕಾರ್ಪಣೆ, ಬೈಕ್ ರ್ಯಾಲಿ, ಗಣೇಶ ಮೈದಾನದಲ್ಲಿ ಸಾರ್ವಜನಿಕ ಸಭೆ, ಜಿಲ್ಲಾ ಕಾರ್ಯಾಲಯ ಭೇಟಿ ನೀಡಿ, ಪತ್ರಿಕಾ ಗೋಷ್ಠಿಯನ್ನು ನಡೆಸಲಿದ್ದಾರೆ.
ಬೀದರ್ ನಿಂದ ಮಧ್ಯಾಹ್ನ 2.30ಕ್ಕೆ ಹೊರಟು ರಸ್ತೆ ಮಾರ್ಗದ ಮೂಲಕ ಸಂಜೆ 4 ಗಂಟೆಗೆ ಕಲಬುರ್ಗಿ ತಲುಪಲಿದ್ದಾರೆ. ಅಲ್ಲಿ ಜಿಲ್ಲಾ ಕಾರ್ಯಾಲಯ ಭೇಟಿ ಮಾಡಿ, ಬೂತ್ ಅಧ್ಯಕ್ಷರ ಮನೆಗೆ ಭೇಟಿ ನೀಡಲಿದ್ದಾರೆ. ಶ್ರೀ ಶರಣಬಸವೇಶ್ವರ ದೇವಸ್ಥಾನಕ್ಕೆ ಭೇಟಿ, ಕಾರ್ಯಕರ್ತರ ಸಭೆಯನ್ನು ನಡೆಸಲಿದ್ದಾರೆ.
ಕಲಬುರ್ಗಿಯಿಂದ ರಾತ್ರಿ 8.25ರ ಹಾಗೆ ರೈಲಿನ ಮೂಲಕ ಹೊರಟು, ದಿನಾಂಕ 30-01-2024ರ ಮಂಗಳವಾರದಂದು ಯಲಹಂಕ ರೈಲ್ವೆ ನಿಲ್ದಾಣವನ್ನು ಬೆಳಿಗ್ಗೆ 6 ಗಂಟೆಗೆ ತಲುಪಲಿದ್ದಾರೆ.
BREAKING : ಭೂಮಿ ಹಗರಣ ಪ್ರಕರಣ : ಬಿಹಾರ ಮಾಜಿ ಸಿಎಂ ಲಾಲು ಪತ್ನಿ ರಾಬ್ರಿ ದೇವಿ, ಪುತ್ರಿಯರಿಗೆ ‘ಕೋರ್ಟ್ ಸಮನ್ಸ್’
BREAKING: ಲೋಕಸಭಾ ಚುನಾವಣೆ: ರಾಜ್ಯದ 28 ಕ್ಷೇತ್ರಗಳಿಗೆ ‘ಬಿಜೆಪಿ ಉಸ್ತುವಾರಿ’ಗಳು ನೇಮಕ, ಇಲ್ಲಿದೆ ಸಂಪೂರ್ಣ ಲೀಸ್ಟ್