ಬೆಂಗಳೂರು: ನಗರದಲ್ಲಿ ಹೆಚ್ಚುತ್ತಿರುವ ಕಾವೇರಿ ನೀರಿನ ಬೇಡಿಕೆಯನ್ನು ಪೂರೈಸಲು ಹೆಣಗಾಡುತ್ತಿರುವ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್ಎಸ್ಬಿ) ಹೆಚ್ಚಿನ ಕೊಳವೆಬಾವಿಗಳನ್ನು ಕೊರೆಯಲು ಮತ್ತು ನಿಷ್ಕ್ರಿಯವಾಗಿರುವ ಕೊಳವೆಬಾವಿಗಳನ್ನು ದುರಸ್ತಿ ಮಾಡಲು ನಾಗರಿಕ ಸಂಸ್ಥೆಯಿಂದ 37.5 ಕೋಟಿ ರೂ ಪಡೆದುಕೊಂಡಿದೆ.
ನಗರದ ವಿವಿಧ ಭಾಗಗಳಲ್ಲಿ ಇದೇ ರೀತಿಯ ಕೆಲಸಗಳಿಗಾಗಿ ಬಿಬಿಎಂಪಿ ಖರ್ಚು ಮಾಡಲು ಬಯಸಿರುವ 32.60 ಕೋಟಿ ರೂ.ಗೆ ಇದು ಹೆಚ್ಚುವರಿಯಾಗಿದೆ.
ಈಗಾಗಲೇ ಪೈಪ್ ಲೈನ್ ಮೂಲಸೌಕರ್ಯ ಇರುವ ಪ್ರಮುಖ ಪ್ರದೇಶಗಳಿಗೆ ಜಲಮಂಡಳಿ ನೀರು ಸರಬರಾಜು ಮಾಡುತ್ತಿದ್ದರೆ, ಬಿಬಿಎಂಪಿ ನೀರು ಪೂರೈಸಲು ಹೊರವಲಯದಲ್ಲಿ ಕೊಳವೆಬಾವಿಗಳನ್ನು ಕೊರೆಸುತ್ತಿದೆ.
ಕಾವೇರಿ ನೀರಿನ ಕೊರತೆ ಇರುವ ಪ್ರಮುಖ ಪ್ರದೇಶಗಳಲ್ಲಿ ಕೊಳವೆಬಾವಿ ಕೊರೆಯಲು ಜಲಮಂಡಳಿಗೆ 37.5 ಕೋಟಿ ರೂ. ಬಿಡುಗಡೆ ಮಾಡಿದೆ.
ಹೆಬ್ಬಾಳ, ಸರ್ವಜ್ಞನಗರ, ಪುಲಕೇಶಿನಗರ, ಗಾಂಧಿನಗರ, ಗೋವಿಂದರಾಜನಗರ, ಬಿಟಿಎಂ ಲೇಔಟ್, ಪದ್ಮನಾಭನಗರ, ಜಯನಗರ, ವಿಜಯನಗರ, ಚಿಕ್ಕಪೇಟೆ, ಬಸವನಗುಡಿ, ಆರ್.ಆರ್.ನಗರ ಕ್ಷೇತ್ರಗಳಿಗೆ ತಲಾ 2 ಕೋಟಿಯಿಂದ 5 ಕೋಟಿ ರೂ. ಮೀಸಲಿಟ್ಟಿದೆ
ಬಿಬಿಎಂಪಿಯು 110 ಗ್ರಾಮಗಳಲ್ಲಿ ಒಟ್ಟು 32.30 ಕೋಟಿ ರೂ.ಗಳ ವೆಚ್ಚದಲ್ಲಿ ಕೊಳವೆಬಾವಿಗಳನ್ನು ಕೊರೆಯಲಿದೆ. ಯಲಹಂಕ, ಬೊಮ್ಮನಹಳ್ಳಿ, ಮಹದೇವಪುರ, ಆರ್.ಆರ್.ನಗರ ಮತ್ತು ದಾಸರಹಳ್ಳಿ ವಲಯಗಳಿಗೆ ನೀರು ಪೂರೈಸಲು ಮೂಲಸೌಕರ್ಯ ಕಲ್ಪಿಸಲಾಗಿದೆ.