ಬೆಂಗಳೂರು : ಮೊಬೈಲ್ ಆ್ಯಪ್, ವಾಟ್ಸ್‌ಆ್ಯಪ್ ಚಾಟ್‌ಬಾಟ್, ಪೇಟಿಎಂಗಳ ಜೊತೆಗೆ, ಇನ್ನೂ ಒಂಬತ್ತು ಆ್ಯಪ್‌ಗಳ ಮೂಲಕ ‘ನಮ್ಮ ಮೆಟ್ರೋ’ ಪ್ರಯಾಣದ ಟಿಕೆಟ್ ಖರೀದಿಸಬಹುದು.
ಇನ್ನು ಮುಂದೆ ಈಗಿರುವ ಸೌಲಭ್ಯಗಳ ಜೊತೆಗೆ ಈಸ್ ಮೈ ಟ್ರಿಪ್, ಹೈವೇ ಡಿಲೈಟ್, ಮೈಲ್ಸ್ ಆ್ಯಂಡ್ ಕಿಲೋಮೀಟರ್ಸ್ ವಯಾ ಟೆಲಿಗ್ರಾಂ, ನಮ್ಮ ಯಾತ್ರಿ, ಒನ್ ಟಿಕೆಟ್, ರ್ಯಾ ಪಿಡೊ, ರೆಡ್ ಬಸ್, ಟ್ಯುಮೊಕ್, ಯಾತ್ರಿ – ಸಿಟಿ ಟ್ರಾವೆಲ್, ಗೈಡ್ ಆ್ಯಪ್‌ಗಳ ಮೂಲಕವೂ ಪ್ರಯಾಣಿಕರು ‘ನಮ್ಮ ಮೆಟ್ರೋ’ದ ಕ್ಯೂಆರ್ ಕೋಡ್ ಆಧಾರಿತ ಟಿಕೆಟ್‌ಗಳನ್ನು ಪಡೆಯಬಹುದು.