ಲಂಡನ್: ಎಸೆಕ್ಸ್‌ನ ಸೌತೆಂಡ್ ವಿಮಾನ ನಿಲ್ದಾಣದಲ್ಲಿ ಬಿಸಿನೆಸ್ ಚೆಟ್ ವಿಮಾನವೊಂದು ಪತನಗೊಂಡಿದೆ. ಈ ವಿಮಾನ ಅಪಘಾತದ ನಂತ್ರ ಎಷ್ಟು ಜನರು ಸಾವನ್ನಪ್ಪಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಇಂದು ಮಧ್ಯಾಹ್ನ 4 ಗಂಟೆ ಸುಮಾರಿಗೆ ವಿಮಾನ ನಿಲ್ದಾಣದಲ್ಲಿ ನಡೆದ ಘಟನೆಯಿಂದ “ದೊಡ್ಡ ಬೆಂಕಿಯ ಉಂಡೆ” ಮತ್ತು ಕಪ್ಪು ಹೊಗೆ ಕಾಣಿಸಿಕೊಂಡಿದೆ ಎಂದು ಪ್ರತ್ಯಕ್ಷದರ್ಶಿಗಳು ವಿವರಿಸಿದ್ದಾರೆ. ವಿಮಾನದಲ್ಲಿ ಎಷ್ಟು ಜನರಿದ್ದರು ಎಂಬುದು ಸ್ಪಷ್ಟವಾಗಿಲ್ಲ.
ವರದಿಗಳ ಪ್ರಕಾರ, ವಿಮಾನವು ಟೇಕ್ ಆಫ್ ಆಗುವಾಗ ಅಪಘಾತಕ್ಕೀಡಾಗಿದ್ದು, ಸಣ್ಣ ಜೆಟ್ ವಿಮಾನವು ನೆದರ್‌ಲ್ಯಾಂಡ್ಸ್‌ಗೆ ಪ್ರಯಾಣಿಸುತ್ತಿತ್ತು ಎಂದು ನಂಬಲಾಗಿದೆ.
ರಾಜ್ಯದ ಹಾಲು ಉತ್ಪಾದಕರಿಗೆ ಡಿ.ಕೆ ಸುರೇಶ್ ಗುಡ್ ನ್ಯೂಸ್: 2 ಹಸು ಖರೀದಿಗೆ 2 ಲಕ್ಷ ವರೆಗೂ ಸಾಲ ಸೌಲಭ್ಯ
BIG NEWS: ‘ಸಿಗಂದೂರು ಸೇತುವೆ’ಗಾಗಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಯಡಿಯೂರಪ್ಪಗೆ ಬರೆದಿದ್ದ ಪತ್ರ ವೈರಲ್