ಬೆಂಗಳೂರು: ರಾಜ್ಯ ಸರ್ಕಾರದಿಂದ ವಿಧಾನ ಪರಿಷತ್ ಸದಸ್ಯರಿಗೆ ಭಂಪರ್ ಗಿಫ್ಟ್ ನೀಡಲಾಗಿದೆ. ಬರೋಬ್ಬರಿ 299 ಕೋಟಿ ಅನುದಾನವನ್ನು ಬಿಡುಗಡೆ ಮಾಡಿ ಸರ್ಕಾರ ಆದೇಶಿಸಿದೆ.
ಈ ಕುರಿತಂತೆ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಜಂಟಿ ನಿರ್ದೇಶಕರು ಹಾಗೂ ಪದನಿಮಿತ್ತ ಸರ್ಕಾರದ ಉಪ ಕಾರ್ಯದರ್ಶಿಯವು ನಡವಳಿಯನ್ನು ಹೊರಡಿಸಿದ್ದಾರೆ. ಅದರಲ್ಲಿ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಅಧೀನದಲ್ಲಿ ಬರುವ ವಿವಿಧ ಇಲಾಖೆ/ಸಂಸ್ಥೆ/ಮಂಡಳಿ/ಪ್ರಾಧಿಕಾರಗಳಿಗೆ ಸಂಬಂಧಿಸಿದಂತೆ ಯೋಜನಾ ಕಾರ್ಯಕ್ರಮಗಳನ್ನು 2025-26ನೇ ಸಾಲಿಗೆ ಮುಂದುವರೆಸಲಾಗಿದೆ ಹಾಗೂ ಪುಸಕ್ತ ಸಾಲಿನ ಆಯವ್ಯಯದಲ್ಲಿ ಕರ್ನಾಟಕ ಶಾಸಕರ ಸ್ಥಳೀಯ ಪುದೇಶಾಭಿವೃದ್ಧಿ ಯೋಜನೆಯಡಿ ಒಟ್ಟು ರೂ.60225.17 ಲಕ್ಷಗಳನ್ನು ಈ ಕೆಳಕಂಡಂತೆ ಒದಗಿಸಲಾಗಿದೆ ಎಂದಿದ್ದಾರೆ.
ಕರ್ನಾಟಕ ಶಾಸಕರ ಸ್ಥಳೀಯ ಪುದೇಶಾಭಿವೃದ್ಧಿ ಯೋಜನೆಯ ಮಾರ್ಗಸೂಚಿ ಕಂಡಿಕೆ 4.7 ರನ್ವಯ ಜಿಲ್ಲಾ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಲೆಕ್ಕ ಶೀರ್ಷಿಕೆ 2575-60-265-0-02- 034 (ಗುತ್ತಿಗೆ/ಹೊರಗುತ್ತಿಗೆ) ರಡಿ 2025-26ನೇ ಸಾಲಿನಲ್ಲಿ ಒದಗಿಸಿರುವ ಅನುದಾನದ ಪೈಕಿ ರೂ.6.71 ಲಕ್ಷಗಳನ್ನು, 2024-25ನೇ ಸಾಲಿನಲ್ಲಿ ಕಾರ್ಯನಿರತ ಸಿಬ್ಬಂದಿಗಳ ವೇತನಕ್ಕೆ ಕೊರತೆಯಾಗಿದ್ದ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 2025-26 ನೇ ಸಾಲಿನಲ್ಲಿ, ಪಧಾನ ಲೆಕ್ಕಶೀರ್ಷಿಕೆ 4575 ರಡಿ ಮೊದಲನೇ ಕಂತಿನ ಅನುದಾನವಾಗಿ 224 ವಿಧಾನ ಸಭಾ ಕ್ಷೇತ್ರಗಳಿಗೆ ಹಾಗೂ 71 ಮಾನ್ಯ ವಿಧಾನ ಪರಿಷತ್ತಿನ ಸದಸ್ಯರು-ಇವರುಗಳಿಗೆ (ಪದಾವಧಿಯನ್ನಾಧರಿಸಿ) ತಲಾ ರೂ.50.00 ಲಕ್ಷಗಳಂತೆ ಒಟಾರೆ ರೂ.147.50 ಕೋಟಿಗಳನ್ನು ಬಿಡುಗಡೆ ಮಾಡಲಾಗಿರುತ್ತದೆ.
ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 2025-26 ನೇ ಸಾಲಿನಲ್ಲಿ, ಪಧಾನ ಲೆಕ್ಕಶೀರ್ಷಿಕೆ 2575 ರಡಿ ಕಂಡಿಕೆ 4.7 ರನ್ವಯ ಜಿಲ್ಲಾ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಲೆಕ್ಕ ಶೀರ್ಷಿಕೆ 2575-60-265-0-02-034 (ಗುತ್ತಿಗೆ/ಹೊರಗುತ್ತಿಗೆ) ರಡಿ 2025-26ನೇ ಸಾಲಿನಲ್ಲಿ ಒದಗಿಸಿರುವ ಅನುದಾನದ ಪೈಕಿ ರೂ.112.26547 ಲಕ್ಷಗಳನ್ನು, ಬಿಡುಗಡೆ ಮಾಡಲಾಗಿರುತ್ತದೆ.
ಕರ್ನಾಟಕ ಶಾಸಕರ ಸ್ಥಳೀಯ ಪುದೇಶಾಭಿವೃದ್ಧಿ ಯೋಜನೆಯಡಿ 2025-26 ನೇ ಸಾಲಿನಲ್ಲಿ, ಪ್ರಧಾನ ಲೆಕ್ಕಶೀರ್ಷಿಕೆ 4575 ರಡಿ ಎರಡನೇ ಕಂತಿನ ಅನುದಾನವಾಗಿ 224 ವಿಧಾನ ಸಭಾ ಕ್ಷೇತ್ರಗಳಿಗೆ ಹಾಗೂ 71 ಮಾನ್ಯ ವಿಧಾನ ಪರಿಷತ್ತಿನ ಸದಸ್ಯರು-ಇವರುಗಳಿಗೆ (ಪದಾವಧಿಯನ್ನಾಧರಿಸಿ) ತಲಾ ರೂ.50.00 ಲಕ್ಷಗಳಂತೆ ಒಟ್ಟಾರೆ ರೂ.147.50 ಕೋಟಿಗಳನ್ನು ಬಿಡುಗಡೆ ಮಾಡಲಾಗಿರುತ್ತದೆ.
ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 2025-26 ನೇ ಸಾಲಿನಲ್ಲಿ, ಪಧಾನ ಲೆಕ್ಕಶೀರ್ಷಿಕೆ 2575 ರಡಿ ಕಂಡಿಕೆ 4.7 ರನ್ವಯ ಜಿಲ್ಲಾ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಲೆಕ್ಕ ಶೀರ್ಷಿಕೆ 2575-60-265-0-02-034 (ಗುತ್ತಿಗೆ/ಹೊರಗುತ್ತಿಗೆ) ರಡಿ 2025-26ನೇ ಸಾಲಿನಲ್ಲಿ ಒದಗಿಸಿರುವ ಅನುದಾನದ ಪೈಕಿ ರೂ.56.13287 ಲಕ್ಷಗಳನ್ನು, ಬಿಡುಗಡೆ ಮಾಡಲಾಗಿರುತ್ತದೆ.
ಮುಂದುವರೆದು, ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 2025- 26 ನೇ ಸಾಲಿನಲ್ಲಿ, ಪ್ರಧಾನ ಲೆಕ್ಕಶೀರ್ಷಿಕೆ 4575 ರಡಿ ಮೂರು ಮತ್ತು ನಾಲ್ಕನೇ ಕಂತಿನ ಅನುದಾನವಾಗಿ 224 ವಿಧಾನ ಸಭಾ ಕ್ಷೇತ್ರಗಳಿಗೆ ಹಾಗೂ 75 ಮಾನ್ಯ ವಿಧಾನ ಪರಿಷತ್ತಿನ ಸದಸ್ಯರು-ಇವರುಗಳಿಗೆ (ಪದಾವಧಿಯನ್ನಾಧರಿಸಿ) ತಲಾ ರೂ.100.00 ಲಕ್ಷಗಳನ್ನು ಬಿಡುಗಡೆ ಮಾಡಲು ಸರ್ಕಾರವು ಉದ್ದೇಶಿಸಿದೆ. ಅದರಂತೆ ಈ ಕೆಳಕಂಡಂತೆ ಆದೇಶಿಸಿರುವುದಾಗಿ ಹೇಳಿದ್ದಾರೆ.
ಪುಸ್ತಾವನೆಯಲ್ಲಿ ವಿವರಿಸಿರುವಂತೆ, ಕರ್ನಾಟಕ ಶಾಸಕರ ಸ್ಥಳೀಯ ಪುದೇಶಾಭಿವೃದ್ಧಿ ಯೋಜನೆಯಡಿ 2025-26ನೇ ಸಾಲಿನ ಪ್ರಧಾನ ಲೆಕ್ಕಶೀರ್ಷಿಕೆ 4575 ರಡಿ ಮೂರು ಮತ್ತು ನಾಲ್ಕನೇ ಕಂತಾಗಿ ತಲಾ ರೂ.1.00 ಕೋಟಿಗಳನ್ನು ಅನುಬಂಧ-1ರಲ್ಲಿರುವ 31 ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಈ ಕೆಳಕಂಡ ಲೆಕ್ಕ ಶೀರ್ಷಿಕೆಗಳಡಿ ಒಟ್ಟು ರೂ.299.00/- ಕೋಟಿಗಳನ್ನು (ಎರಡು ನೂರ ತ್ತೊಂಬತ್ತೊಂಬತ್ತು ಕೋಟಿ ರೂಪಾಯಿಗಳು ಮಾತ್ರ ಬಿಡುಗಡೆ ಮಾಡಿದೆ. ಅನುಬಂಧ-2ರಲ್ಲಿ 224 ವಿಧಾನ ಸಭಾ ಕ್ಷೇತ್ರಗಳು ಮತ್ತು ಅನುಬಂಧ-3 ರಲ್ಲಿ 75 ಮಾನ್ಯ ವಿಧಾನ ಪರಿಷತ್ತಿನ ಸದಸ್ಯರ ವಿವರಗಳನ್ನು ಲಗತ್ತಿಸಿದೆ ಎಂದು ಹೇಳಿದ್ದಾರೆ.

ಇನ್ಮುಂದೆ ಸರ್ಕಾರಿ ಅಧಿಕಾರಿಗಳು ‘ಜನಪ್ರತಿನಿಧಿ’ಗಳ ಪೋನ್ ಕಾಲ್ ಸ್ವೀಕರಿಸಲೇಬೇಕು: ರಾಜ್ಯ ಸರ್ಕಾರ ಖಡಕ್ ಆದೇಶ








