ತುಮಕೂರು: ಏರುಗತಿಯಲ್ಲಿ ಸಾಗುತ್ತಿರುವ ಕೊಬ್ಬರಿ ದರ ತಿಪಟೂರು ಮಾರುಕಟ್ಟೆಯಲ್ಲಿ ಸೋಮವಾರ ಕ್ವಿಂಟಾಲ್ ಕೊಬ್ಬರಿ ಬರೋಬ್ಬರಿ 26,167 ರೂಪಾಯಿಗೆ ಮಾರಾಟವಾಗಿ ಸಾರ್ವಕಾಲಿಕ ದಾಖಲೆ ಬರೆದಿದೆ.
ಸೋಮವಾರ ಮಾರುಕಟ್ಟೆಗೆ 3351 ಕ್ವಿಂಟಾಲ್ ಕೊಬ್ಬರಿ ಬಂದಿದ್ದು, ಸರಾಸರಿ 25,300 ರೂ.ನಂತೆ ಮಾರಾಟವಾಗಿದೆ. ಕನಿಷ್ಠ ದರ 23,000 ಹಾಗೂ ಗರಿಷ್ಠ 26,167 ರೂ. ದಾಖಲಾಗಿದೆ.
ಕೊಬ್ಬರಿ ಬೆಲೆ ಹೆಚ್ಚಳದ ಜೊತೆಗೆ ಕೊಬ್ಬರಿ ಎಣ್ಣೆ ಬೆಲೆಯೂ ಏರಿಕೆಯಾಗುತ್ತಿರುವುದು ಭವಿಷ್ಯದಲ್ಲಿಯೂ ಕೊಬ್ಬರಿಗೆ ಬೆಲೆ ಉಳಿಯಲಿದೆ ಎಂಬ ಸೂಚನೆ ಎನ್ನಲಾಗಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿ 15 ಕೆಜಿ ಕೊಬ್ಬರಿ ಎಣ್ಣೆಗೆ 5500 ರೂ. ಬೆಲೆ ದಾಖಲಾಗಿದ್ದು, ಇದೂ ಸಾರ್ವಕಾಲಿಕ ದಾಖಲೆ ಎನಿಸಿದೆ. ಕಳೆದೊಂದು ತಿಂಗಳಿನಿಂದ 600 ರೂ. ಬೆಲೆ ಹೆಚ್ಚಳವಾಗಿದೆ.