ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಬೀಡಾಡಿ ದನಗಳು ಮತ್ತು ಬೀದಿ ನಾಯಿಗಳ ದಾಳಿ ಹೆಚ್ಚುತ್ತಿದೆ. ಜಾನುವಾರು ಮತ್ತು ನಾಯಿ ದಾಳಿಯಿಂದ ಕೆಲವರು ಪ್ರಾಣ ಕಳೆದುಕೊಳ್ಳುತ್ತಿದ್ರೆ, ಉಳಿದವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಳಿಗ್ಗೆ ವಾಕಿಂಗ್ ಮಾಡುತ್ತಿದ್ದ ವೃದ್ಧನನ್ನ ಗೂಳಿಯೊಂದು ಇರಿದು ಕೊಂದಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಬರೇಲಿ ನಗರದಲ್ಲಿ ಘಟನೆ ನಡೆದಿದೆ.
ಮೃತನನ್ನ ಕೃಷ್ಣಾನಂದ ಪಾಂಡೆ ಎಂದು ಗುರುತಿಸಲಾಗಿದೆ. ಆತ ನಿವೃತ್ತ ಸರ್ಕಾರಿ ಉದ್ಯೋಗಿಯಾಗಿದ್ದು, 75 ವರ್ಷ ವಯಸ್ಸಾಗಿತ್ತು. ಪ್ರತಿದಿನದಂತೆ ಬುಧವಾರ(ಜನವರಿ 24) ವಾಕಿಂಗ್ ಹೋಗಿದ್ದು, ಬೆಳಿಗ್ಗೆ 8 ಗಂಟೆ ಸುಮಾರಿಗೆ ರಸ್ತೆಯಲ್ಲಿ ನಡೆದುಕೊಂಡು ಬರುವಾಗ ಉದ್ವಿಗ್ನಗೊಂಡ ಗೂಳಿಯೊಂದು ಒಂಟಿಯಾಗಿದ್ದ ವೃದ್ಧ ಮೇಲೇರಗಿ ದಾಳಿ ಮಾಡಿದೆ. ಕೊಂಬುಗಳಿಂದ ಹೊಟ್ಟೆಗೆ ಇರಿದು ಕೊಂದಿದೆ.
ಗೂಳಿ ಬಲವಾಗಿ ತನ್ನ ಕೊಂಬುಗಳಿಂದ ವೃದ್ಧನನ್ನ ಹೊಡೆಯುತ್ತಿದ್ದಂತೆ, ಆತ ಜಿಗಿದು ನೆಲಕ್ಕೆ ಬಿದಿದ್ದಾನೆ. ಆದರೂ ಅವನನ್ನ ಬಿಡದ ಗೂಳಿ, ಇರಿಯುತ್ತಲೇ ಇದೆ. ಬಹಳ ಸಮಯದವರೆಗೆ ಗೂಳಿ ದಾಳಿ ಮಾಡುತ್ತಲೇ ಇತ್ತು. ಗೂಳಿ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ವೃದ್ಧ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಆಘಾತಕಾರಿ ಈ ಸಧ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
#उत्तर_प्रदेश #बरेली के संजय नगर में सुबह मॉर्निंग वॉक पर निकले रिटायर्ड बैंक कर्मचारी को सांड ने जान से मार डाला !!#Bareilly #Bull @bareilly_nn @dmbareilly #viralvideo pic.twitter.com/Dyk5P1MeZg
— MANOJ SHARMA LUCKNOW UP🇮🇳🇮🇳🇮🇳 (@ManojSh28986262) January 24, 2024
BREAKING: ವಿಜಯಪುರದಲ್ಲಿ ಬೆಚ್ಚಿಬೀಳಿಸೋ ಘಟನೆ: ಧ್ವಜಾರೋಹಣದ ವೇಳೆಯಲ್ಲೇ ವ್ಯಕ್ತಿಯೋರ್ವನಿಂದ ಗುಂಡಿನ ದಾಳಿ
ವಿಶ್ವದಲ್ಲೇ ಮೊದಲ ಬಾರಿಗೆ ‘ನೈಟ್ರೋಜನ್ ಅನಿಲ’ ಬಳಸಿ ‘ಮರಣದಂಡನೆ’ : 7 ನಿಮಿಷದಲ್ಲೇ ಕೈದಿ ಖತಂ