ನವದೆಹಲಿ: 2025ನೇ ಸಾಲಿನ ವರ್ಷವು ಭಾರತದ ಅಭಿವೃದ್ಧಿ ಪಯಣದಲ್ಲಿ ನಿರ್ಣಾಯಕ ಅಧ್ಯಾಯವಾಗಿ ನಿಂತಿದೆ. ರೈಲು, ರಸ್ತೆ, ವಾಯುಯಾನ, ಸಮುದ್ರ ಮತ್ತು ಡಿಜಿಟಲ್ ಸೇರಿದಂತೆ ಮೂಲಸೌಕರ್ಯದ ಪ್ರತಿಯೊಂದು ಆಯಾಮದಲ್ಲೂ ಭಾರತದ ಅಭಿವೃದ್ಧಿ ಮಹತ್ವಾಕಾಂಕ್ಷೆಗಳನ್ನು ಲಕ್ಷಾಂತರ ನಾಗರಿಕರ ಪಾಲಿಗೆ ಮೂರ್ತರೂಪದ ವಾಸ್ತವವಾಗಿ ಈ ವರ್ಷವು ಸಾಕಾರಗೊಳಿಸಿದೆ. ದೂರದ ಗಡಿಗಳಿಂದ ದೇಶದ ಅತಿದೊಡ್ಡ ನಗರ ಕೇಂದ್ರಗಳವರೆಗೆ, ಸಂಪರ್ಕವು ವ್ಯಾಪಿಸಿದೆ, ದೂರಗಳು ಕುಗ್ಗಿವೆ ಮತ್ತು ಆಕಾಂಕ್ಷೆಗಳ ಅಡಿಪಾಯವು ಉಕ್ಕು, ಕಾಂಕ್ರೀಟ್‌ನಿಂದ ಮತ್ತಷ್ಟು ಗಟ್ಟಿಗೊಂಡಿದೆ.
ಮೂಲಸೌಕರ್ಯಕ್ಕಾಗಿ ಸರ್ಕಾರದ ಬಂಡವಾಳ ಹೂಡಿಕೆ ವೆಚ್ಚವು 2025-26ರ ಹಣಕಾಸು ವರ್ಷದಲ್ಲಿ 11.21 ಲಕ್ಷ ಕೋಟಿ ರೂ.ಗೆ (ಸುಮಾರು 128.64 ಬಿಲಿಯನ್ ಡಾಲರ್) ಏರಿದೆ. ಇದು ಜಿಡಿಪಿಯ ಶೇ.3.1 ರಷ್ಟಿದೆ. ಭಾರತವು 2047ರ ವೇಳೆಗೆ ಪ್ರತಿ 12-18 ತಿಂಗಳಿಗೊಮ್ಮೆ ತನ್ನ ಜಿಡಿಪಿಗೆ 1 ಟ್ರಿಲಿಯನ್ ಡಾಲರ್ ಸೇರಿಸುವ ನಿರೀಕ್ಷೆಯಿದೆ. ಮೂಲಸೌಕರ್ಯವು ಆರ್ಥಿಕ ಬೆಳವಣಿಗೆಯ ಗುಣಕವಾಗಿದೆ, ಮತ್ತು 2025ನೇ ಸಾಲಿನ ವರ್ಷವು ಈ ಗುಣಕವು ದೃಗ್ಗೋಚರ ಆದಾಯವನ್ನು ನೀಡಲು ಪ್ರಾರಂಭಿಸಿದ ವರ್ಷವಾಗಿದೆ
ಭಾರತದ ರಾಷ್ಟ್ರೀಯ ರೈಲ್ವೆ ಜಾಲಕ್ಕೆ ಸಂಪರ್ಕ ಮೊದಲ ಬಾರಿಗೆ ಸಂಪರ್ಕ ಪಡೆದ ಮಿಜೋರಾಂ
- ಮಿಜೋರಾಂ ಅಂತಿಮವಾಗಿ ಭಾರತದ ರಾಷ್ಟ್ರೀಯ ರೈಲ್ವೆ ಜಾಲದಲ್ಲಿ ಸೇರ್ಪಡೆಗೊಳ್ಳುವುದರೊಂದಿಗೆ ಹೊಸ ಇತಿಹಾಸ ನಿರ್ಮಾಣವಾಗಿದೆ. ಇದು ಈಶಾನ್ಯಕ್ಕೆ ಪರಿವರ್ತನಾತ್ಮಕ ಮೈಲುಗಲ್ಲು ಮತ್ತು ರಾಜ್ಯದ ಜನರ ದೀರ್ಘಕಾಲದ ಆಕಾಂಕ್ಷೆಯ ಈಡೇರಿಕೆಯನ್ನು ಪ್ರತಿಬಿಂಬಿಸುತ್ತದೆ. ಈ ಸಾಧನೆಯೊಂದಿಗೆ, ಮಿಜೋರಾಂ ಭಾರತದ ರೈಲ್ವೆ ನಕ್ಷೆಗೆ ಸೇರ್ಪಡೆಗೊಂಡಿದೆ. 8,000 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾದ ಯೋಜನೆಯಾದ 15 ಕಿಲೋಮೀಟರ್ ಬೈರಾಬಿ-ಸೈರಾಂಗ್ ರೈಲ್ವೆ ಮಾರ್ಗವು ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಐಜ್ವಾಲ್ ಅನ್ನು ನೇರವಾಗಿ ಭಾರತದ ರಾಷ್ಟ್ರೀಯ ರೈಲ್ವೆ ಜಾಲಕ್ಕೆ ಸಂಪರ್ಕಿಸುತ್ತದೆ.
- ತುರ್ತು ಸೇವೆಗಳು, ಸೇನಾ ಸಂಚಾರ, ನಾಗರಿಕ ಆರೋಗ್ಯ ಸೇವೆಗಳ ಲಭ್ಯತೆ, ಶೈಕ್ಷಣಿಕ ಮತ್ತು ಉದ್ಯೋಗಾವಕಾಶಗಳು – ಇವೆಲ್ಲವೂ ಮಿಜೋರಾಂನ ಜನರಿಗೆ ಒಂದೇ ರೈಲ್ವೆ ಮಾರ್ಗದಿಂದ ಭೌತಿಕವಾಗಿ ಸಾಧ್ಯವಾಗಿವೆ. ಅಷ್ಟೇ ಅಲ್ಲದೆ, ಸೆಪ್ಟೆಂಬರ್ 14, 2025 ರಂದು ಅಸ್ಸಾಂನಿಂದ ಐಜ್ವಾಲ್‌ಗೆ 21 ಸಿಮೆಂಟ್ ವ್ಯಾಗನ್‌ಗಳ ರವಾನೆಯೊಂದಿಗೆ ಮೊದಲ ಸರಕು ಸಾಗಣೆಯು ದಾಖಲಾಗಿದೆ. ಸ್ಥಳೀಯ ಕೃಷಿ ಉತ್ಪನ್ನಗಳಾದ ಬಿದಿರು, ತೋಟಗಾರಿಕೆ ಉತ್ಪನ್ನ, ವಿಶೇಷ ಬೆಳೆಗಳು ಈಗ ರಸ್ತೆ ಸಾರಿಗೆಯ ಅಧಿಕ ವೆಚ್ಚವಿಲ್ಲದೆ ಭಾರತದಾದ್ಯಂತ ಮಾರುಕಟ್ಟೆಗಳನ್ನು ತಲುಪಬಹುದು.
ಅತ್ಯಂತ ದುರ್ಗಮ ಭೂಪ್ರದೇಶದ ಮೇಲೆ ಹಿಡಿತ: ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ ಉದ್ಘಾಟನೆ
- ಉಧಂಪುರ್-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕ ಯೋಜನೆಯಡಿ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯಾದ ಚೆನಾಬ್ ಸೇತುವೆಯ ಉದ್ಘಾಟನೆಯೊಂದಿಗೆ ಭಾರತದ ಎಂಜಿನಿಯರಿಂಗ್ ಮೇಲಿನ ವಿಶ್ವಾಸವು ಹೊಸ ಎತ್ತರವನ್ನು ತಲುಪಿದೆ. ಈ ಹೆಗ್ಗುರುತಿನ ಸಾಧನೆಯು ಕಾಶ್ಮೀರ ಕಣಿವೆಯನ್ನು ಸರ್ವಋತು ರೈಲು ಸಂಪರ್ಕದ ಮೂಲಕ ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸಿದೆ, ಇದು ದೀರ್ಘಕಾಲದ ರಾಷ್ಟ್ರೀಯ ಉದ್ದೇಶವನ್ನು ವಾಸ್ತವವಾಗಿ ಬದಲಾಯಿಸಿದೆ.
ತಮಿಳುನಾಡಿನಲ್ಲಿ ಭಾರತದ ಮೊದಲ ವರ್ಟಿಕಲ್-ಲಿಫ್ಟ್ ಸಮುದ್ರ ಸೇತುವೆಯ ಉದ್ಘಾಟನೆ
- 2025ರಲ್ಲಿ ಭಾರತದ ಮೂಲಸೌಕರ್ಯ ಯಶೋಗಾಥೆಯು ಸಮುದ್ರಕ್ಕೂ ವಿಸ್ತರಿಸಿದೆ. ತಮಿಳುನಾಡಿನಲ್ಲಿ ಹೊಸ ʻಪಂಬನ್ ಸೇತುವೆʼಯನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು.
- ಹೊಸ ʻಪಂಬನ್ ಸೇತುವೆʼಯು ಭಾರತದ ಮೊದಲ ವರ್ಟಿಕಲ್ ಲಿಫ್ಟ್ ಸಮುದ್ರ ಸೇತುವೆಯಾಗಿದೆ. ತಾಂತ್ರಿಕ ಪ್ರಗತಿ ಮತ್ತು ವಿಶಿಷ್ಟ ವಿನ್ಯಾಸಗಳಿಗೆ ಹೆಸರುವಾಸಿಯಾದ ಜಾಗತಿಕವಾಗಿ ಗುರುತಿಸಲ್ಪಟ್ಟ ಇತರ ಸೇತುವೆಗಳೊಂದಿಗೆ ಇದು ಹೋಲುತ್ತದೆ. ಇವುಗಳಲ್ಲಿ ಅಮೆರಿಕದ ʻಗೋಲ್ಡನ್ ಗೇಟ್ ಸೇತುವೆʼ, ಲಂಡನ್‌ನ ʻಟವರ್ ಸೇತುವೆʼ ಮತ್ತು ಡೆನ್ಮಾರ್ಕ್-ಸ್ವೀಡನ್‌ನ ʻಒರೆಸುಂಡ್ ಸೇತುವೆʼ ಸೇರಿವೆ.
ಭಾರತದ ಚೊಚ್ಚಲ ವಿಶೇಷ ಕಂಟೈನರ್ ಸಾಗಣೆ ಬಂದರಿಗೆ ಚಾಲನೆ
- 8,900 ಕೋಟಿ ರೂ.ಗಳ ‘ವಿಜಿಂಜಮ್ ಅಂತರರಾಷ್ಟ್ರೀಯ ಆಳವಾದ ನೀರಿನ ವಿವಿಧೋದ್ದೇಶ ಸಮುದ್ರ ಬಂದರು’ವನ್ನು ಪ್ರಧಾನಿ ಉದ್ಘಾಟಿಸಿದರು. ಇದು ದೇಶದ ಮೊದಲ ವಿಶೇಷ ಕಂಟೇನರ್ ಸಾಗಣೆ ಬಂದರಾಗಿದ್ದು, ʻವಿಕಸಿತ ಭಾರತʼದ ಆಶಯದ ಭಾಗವಾಗಿ ಭಾರತದ ಕಡಲ ವಲಯದಲ್ಲಿ ಮಾಡಲಾಗುತ್ತಿರುವ ಪರಿವರ್ತನಾತ್ಮಕ ಪ್ರಗತಿಯನ್ನು ಸೂಚಿಸುತ್ತದೆ.
ಬಿಹಾರದಲ್ಲಿ ಮೊದಲ ʻವಂದೇ ಮೆಟ್ರೋʼಗೆ ಚಾಲನೆ
- ʻನಮೋ ಭಾರತ್ ರಾಪಿಡ್ ರೈಲ್ʼ ಎಂದೂ ಕರೆಯಲ್ಪಡುವ ಬಿಹಾರದ ಮೊದಲ ʻವಂದೇ ಮೆಟ್ರೋʼ ರೈಲಿಗೆ ಚಾಲನೆ ನೀಡಲಾಗಿದೆ. ಇದು ಬಿಹಾರದ ಜಯನಗರವನ್ನು ಪಾಟ್ನಾದಿಂದ ಸಂಪರ್ಕಿಸುವ ಮೂಲಕ ಪ್ರಾದೇಶಿಕ ಸಂಪರ್ಕವನ್ನು ಹೆಚ್ಚಿಸುತ್ತದೆ.
- ಸಂಪೂರ್ಣ ಹವಾನಿಯಂತ್ರಿತವಾದ ಇಂತಹ ಚೊಚ್ಚಲ ರೈಲು ಇದಾಗಿದ್ದು, ಮುಂಗಡ ಕಾಯ್ದಿರಿಸುವಿಕೆ ಸೌಲಭ್ಯವಿರುವ ಈ ರೈಲು ಕೇವಲ ಐದೂವರೆ ಗಂಟೆಗಳಲ್ಲಿ ಪಾಟ್ನಾವನ್ನು ತಲುಪುತ್ತದೆ. ಅಸ್ತಿತ್ವದಲ್ಲಿರುವ ರೈಲುಗಳ ಮೂಲಕ ಸುಮಾರು ಪಟ್ನಾ ತಲುಪಲು ಎಂಟು ಗಂಟೆ ಹಿಡಿಯುತ್ತದೆ.
ಝಡ್-ಮೋರ್ಹ್ ಸುರಂಗದ ಮೂಲಕ ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ವಋತು ಸಂಪರ್ಕ ಖಾತರಿ
- 2025ರಲ್ಲಿ, ಪ್ರಧಾನಮಂತ್ರಿಯವರು ಜಮ್ಮು ಮತ್ತು ಕಾಶ್ಮೀರದಲ್ಲಿ ವ್ಯೂಹಾತ್ಮಕ ಝಡ್-ಮೋರ್ ಸುರಂಗವನ್ನು ಉದ್ಘಾಟಿಸಿದರು. ಇದು ಸೋನಾಮಾರ್ಗ್‌ಗೆ ವರ್ಷವಿಡೀ ಸಂಪರ್ಕವನ್ನು ಖಾತ್ರಿಪಡಿಸುವ ಮತ್ತು ಲಡಾಖ್ ಪ್ರದೇಶಕ್ಕೆ ಪ್ರವೇಶವನ್ನು ಬಲಪಡಿಸುವ ನಿರ್ಣಾಯಕ ಮೂಲಸೌಕರ್ಯ ಯೋಜನೆಯಾಗಿದೆ.
- ಶ್ರೀನಗರ-ಲೇಹ್ ಹೆದ್ದಾರಿಯಲ್ಲಿ ಹಿಮಪಾತ ಪೀಡಿತ ಪ್ರದೇಶಗಳನ್ನು ತಪ್ಪಿಸಲು ನಿರ್ಮಿಸಲಾದ ಈ ಸುರಂಗವು ನಾಗರಿಕ ಸಂಚಾರ, ಪ್ರವಾಸೋದ್ಯಮದ ಹರಿವು ಮತ್ತು ತುರ್ತು ಪ್ರವೇಶವನ್ನು ಇನ್ನಿಲ್ಲದಂತೆ ಸುಧಾರಿಸುತ್ತದೆ. ಜೊತೆಗೆ ರಾಷ್ಟ್ರೀಯ ಭದ್ರತೆ ಮತ್ತು ಮಿಲಿಟರಿ ಸಂಚಾರಕ್ಕೆ ಪ್ರಮುಖ ವ್ಯೂಹಾತ್ಮಕ ಆಸ್ತಿಯಾಗಿ ಕಾರ್ಯನಿರ್ವಹಿಸುತ್ತದೆ.
ಜಮ್ಮುವಿನಿಂದ ಶ್ರೀನಗರಕ್ಕೆ ಮೊದಲ ಬಾರಿಗೆ ರೈಲಿನ ಮೂಲಕ ನೇರ ಸಂಪರ್ಕ
- ಪ್ರಧಾನಿ ಮೋದಿ ಅವರು ಉದ್ಘಾಟಿಸಿದ ಅತ್ಯಾಧುನಿಕ ʻವಂದೇ ಭಾರತ್ ಎಕ್ಸ್‌ಪ್ರೆಸ್ʼ ರೈಲು ಮೊದಲ ಬಾರಿಗೆ ಜಮ್ಮುವಿನಿಂದ ಶ್ರೀನಗರಕ್ಕೆ ರೈಲು ಮೂಲಕ ನೇರ ಸಂಪರ್ಕವನ್ನು ಸಕ್ರಿಯಗೊಳಿಸಿದೆ.
ದೆಹಲಿ-ಮೀರತ್ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ (ಆರ್‌ಆರ್‌ಟಿಎಸ್)
ದೆಹಲಿ-ಮೀರತ್ ʻಆರ್‌ಆರ್‌ಟಿಸ್ʼ ಕಾರಿಡಾರ್‌ನ ಅಂತಿಮ ವಿಭಾಗವು ಪೂರ್ಣ ವಾಣಿಜ್ಯ ಕಾರ್ಯಾಚರಣೆಗೆ ಮುಕ್ತವಾಗಿದ್ದು, ದೆಹಲಿಯ ಸರಾಯ್ ಕಾಲೆ ಖಾನ್‌ನಿಂದ ಮೀರತ್‌ನ ಮೋದಿಪುರಂಗೆ 82.15 ಕಿಲೋಮೀಟರ್ ಸಂಪರ್ಕವನ್ನು ಒದಗಿಸುತ್ತದೆ. ʻಆರ್‌ಆರ್‌ಟಿಎಸ್ʼ ಕಾರಿಡಾರ್ ನಗರ ಸಾರಿಗೆಯನ್ನು ಮರುರೂಪಿಸುತ್ತದೆ. ಈ 180 ಕಿ.ಮೀ/ಗಂಟೆ ಕಾರಿಡಾರ್‌ಗಳು ಪ್ರಾದೇಶಿಕ ಸಂಪರ್ಕದ ವಿಚಾರದಲ್ಲಿ ಭಾರತದ ದೃಷ್ಟಿಕೋನವನ್ನು ಪ್ರತಿನಿಧಿಸುತ್ತವೆ. ನಗರ ಮೆಟ್ರೋ ಮತ್ತು ಇಂಟರ್ ಸಿಟಿ ರೈಲು ನಡುವಿನ ಕಠಿಣ ವ್ಯತ್ಯಾಸವನ್ನು ಮೀರಿ, ವಿವಿಧ ದೂರಗಳಿಗೆ ಅತ್ಯುತ್ತಮ ಕ್ಷಿಪ್ರ ಸಾರಿಗೆಯ ವ್ಯವಸ್ಥೆಯನ್ನು ಇವು ಪ್ರತಿನಿಧಿಸುತ್ತವೆ.
ನವೀ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಉದ್ಘಾಟನೆ
- ನವೀ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೊದಲ ಹಂತದ ಉದ್ಘಾಟನೆಯೊಂದಿಗೆ ಭಾರತದ ವಾಯುಯಾನ ಸಾಮರ್ಥ್ಯವು ಮತ್ತೊಂದು ಜಿಗಿತಕ್ಕೆ ಸಾಕ್ಷಿಯಾಗಿದೆ. ಈ ಮೈಲುಗಲ್ಲು ಮುಂಬೈನ ಅಸ್ತಿತ್ವದಲ್ಲಿರುವ ವಿಮಾನ ನಿಲ್ದಾಣದ ಮೇಲಿನ ಒತ್ತಡವನ್ನು ಕಡಿಮೆ ಮಾಡಿದೆ ಜೊತೆಗೆ ಪ್ರಯಾಣಿಕರ ಮತ್ತು ಸರಕು ಸಾಗಣೆ ಬೆಳವಣಿಗೆಯ ಮುಂದಿನ ಅಲೆಗೆ ಭಾರತದ ಸನ್ನದ್ಧತೆಯನ್ನು ಬಲಪಡಿಸಿದೆ.
ನೌಕಾ ಮೂಲಸೌಕರ್ಯಕ್ಕೆ ಬೃಹತ್ ವರ್ಷ:
- 2025ನೇ ವರ್ಷವು ನೌಕಾ ಮೂಲಸೌಕರ್ಯಕ್ಕೆ ಹೆಗ್ಗುರುತಿನ ವರ್ಷವಾಗಿದೆ. ಆಗಸ್ಟ್ 2025ರಲ್ಲಿ, ಭಾರತವು ಶೇ.75 ಕ್ಕಿಂತ ಹೆಚ್ಚು ದೇಶೀಯ ವಸ್ತುಗಳನ್ನು ಹೊಂದಿರುವ ʻಐಎನ್ಎಸ್ ಹಿಮಗಿರಿʼ ಮತ್ತು ʻಐಎನ್ಎಸ್ ಉದಯಗಿರಿʼ ಎಂಬ ಎರಡು ಸ್ಟೆಲ್ತ್ ಫ್ರಿಗೇಟ್‌ಗಳನ್ನು ಸೇವೆಗೆ ಸೇರ್ಪಡೆಗೊಳಿಸಿದೆ. ಎರಡು ಪ್ರತಿಷ್ಠಿತ ಭಾರತೀಯ ಹಡಗುಕಟ್ಟೆಗಳ ಎರಡು ಪ್ರಮುಖ ಮೇಲ್ಮೈ ಯುದ್ಧನೌಕೆಗಳನ್ನು ಒಂದೇ ಸಮಯದಲ್ಲಿ ನಿಯೋಜಿಸುತ್ತಿರುವುದು ಇದೇ ಮೊದಲು.
ಬೆಂಗಳೂರಿನಲ್ಲಿ ʻಯೆಲ್ಲೋ ಲೈನ್ʼ ಸೇವೆಗಳ ಆರಂಭ
- ಬೆಂಗಳೂರಿನ ಕೇಂದ್ರ ಜಿಲ್ಲೆಯಿಂದ ಎಲೆಕ್ಟ್ರಾನಿಕ್ಸ್ ಸಿಟಿಯ ಟೆಕ್ ಹಬ್‌ಗೆ ಸಂಪರ್ಕ ಕಲ್ಪಿಸುವ ಆರ್.ವಿ.ರಸ್ತೆ (ರಾಗಿಗುಡ್ಡ) ಮೆಟ್ರೋ ನಿಲ್ದಾಣದಲ್ಲಿ ಹಳದಿ ಮಾರ್ಗದ ಮೆಟ್ರೋ ಸೇವೆಯನ್ನು ಪ್ರಧಾನಿ ಉದ್ಘಾಟಿಸಿದರು.
ಅಂಚಿನ ಗ್ರಾಮಗಳಿಗೆ ಬೆಳಕು
- ಮೇ 2025ರಲ್ಲಿ, ಛತ್ತೀಸ್‌ಗಢದ ನಕ್ಸಲ್ ಪೀಡಿತ ಮೊಹ್ಲಾ-ಮನ್ಪುರ್-ಅಂಬಾಗಢ್ ಚೌಕಿ ಜಿಲ್ಲೆಯ 17 ಕುಗ್ರಾಮಗಳು ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ಗ್ರಿಡ್ ವಿದ್ಯುತ್ ಪಡೆದವು, ಇದು 540 ಕುಟುಂಬಗಳಿಗೆ ಪ್ರಯೋಜನವನ್ನು ನೀಡಿದೆ.
ಮೊದಲ ಬಸ್ ಆಗಮನ: ಗಡ್ಚಿರೋಲಿಯ ಕತೆಝರಿ ಕೊನೆಗೂ ಸಾರಿಗೆ ಸಂಪರ್ಕ
- 2025ನೇ ವರ್ಷದಲ್ಲಿ ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿರುವ ನಕ್ಸಲ್ ಪೀಡಿತ ಬುಡಕಟ್ಟು ಗ್ರಾಮವಾದ ಕಟೇಝರಿಯು ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ಬಸ್ ಸಾರಿಗೆ ಸೌಲಭ್ಯವನ್ನು ಪಡೆದಿದೆ. ಗ್ರಾಮಸ್ಥರು ಚೊಚ್ಚಲ ಬಸ್ ಆಗಮನವನ್ನು ಸಂಭ್ರಮಿಸಿದರು.
ಸಂಪರ್ಕವಿಲ್ಲದವರಿಗೆ ಸಂಪರ್ಕ: ಕೊಂಡಪಲ್ಲಿ ತಲುಪಿದ ಮೊಬೈಲ್ ನೆಟ್ವರ್ಕ್
- ಡಿಸೆಂಬರ್ 2025 ರಲ್ಲಿ, ಛತ್ತೀಸ್‌ಗಢದ ನಕ್ಸಲ್ ಪೀಡಿತ ಬಿಜಾಪುರ ಜಿಲ್ಲೆಯ ಕೊಂಡಪಲ್ಲಿ ಗ್ರಾಮದಲ್ಲಿ ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ಮೊಬೈಲ್ ಟವರ್ ಅನ್ನು ಅಳವಡಿಸಲಾಯಿತು.
ಈಗ 160ಕ್ಕೂ ವಿಮಾನ ನಿಲ್ದಾಣಗಳು
- ಭಾರತದ ಆಗಸವು ಈಗ ಹಿಂದೆಂದಿಗಿಂತಲೂ ಹೆಚ್ಚು ಚಟುವಟಿಕೆಯಿಂದ ಕೂಡಿದೆ. ಭಾರತವು ವಿಶ್ವದ ಮೂರನೇ ಅತಿದೊಡ್ಡ ದೇಶೀಯ ವಿಮಾನಯಾನ ಮಾರುಕಟ್ಟೆಯಾಗಿ ಹೊರಹೊಮ್ಮಿದೆ. 2014ರಲ್ಲಿ 74 ಇದ್ದ ವಿಮಾನ ನಿಲ್ದಾಣಗಳ ಸಂಖ್ಯೆ 2025ರಲ್ಲಿ 163ಕ್ಕೆ ಏರಿದೆ. ಏತನ್ಮಧ್ಯೆ, ಭಾರತವು 2047ರಲ್ಲಿ ಸ್ವಾತಂತ್ರ್ಯದ ನೂರು ವರ್ಷಗಳನ್ನು ಆಚರಿಸುವ ಹೊತ್ತಿಗೆ ವಿಮಾನ ನಿಲ್ದಾಣಗಳನ್ನು 350-400 ಕ್ಕೆ ಹೆಚ್ಚಿಸುವ ಗುರಿಯನ್ನು ಸರ್ಕಾರ ಹೊಂದಿದೆ.
ಶೇ.99ರಷ್ಟು ರೈಲ್ವೆ ವಿದ್ಯುದ್ದೀಕರಣ
- ಭಾರತೀಯ ರೈಲ್ವೆಯು ತನ್ನ ಸಂಪೂರ್ಣ ಬ್ರಾಡ್-ಗೇಜ್ ಜಾಲದ ವಿದ್ಯುದ್ದೀಕರಣದ ಕಡೆಯ ಘಟ್ಟದಲ್ಲಿದೆ. ಶೇ.99ಕ್ಕಿಂತ ಹೆಚ್ಚು ಮಾರ್ಗ ಈಗಾಗಲೇ ವಿದ್ಯುದ್ದೀಕರಣಗೊಂಡಿದೆ ಮತ್ತು ಉಳಿದ ವಿಸ್ತರಣೆಗಳು ಶೀಘ್ರದಲ್ಲೇ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಇತ್ತೀಚಿನ ವರ್ಷಗಳಲ್ಲಿ ಕೆಲಸದ ವೇಗವು ಅಸಾಧಾರಣವಾಗಿದೆ.
3ನೇ ಅತಿದೊಡ್ಡ ಮೆಟ್ರೋ ಜಾಲ
- ಭಾರತದ ಮೆಟ್ರೋ ಜಾಲವು 248 ಕಿಮೀ (2014) ನಿಂದ 1,013 ಕಿಮೀಗೆ (2025) ಬೆಳೆದಿದೆ. ಭಾರತವು ಈಗ ಹೆಮ್ಮೆಯಿಂದ ವಿಶ್ವದ ಮೂರನೇ ಅತಿದೊಡ್ಡ ಮೆಟ್ರೋ ಜಾಲವಾಗಿ ನಿಂತಿದೆ. ಇದು ನಗರ ಸಾರಿಗೆ ವಿಸ್ತರಣೆಯಲ್ಲಿ ಭಾರತದ ತ್ವರಿತ ದಾಪುಗಾಲುಗಳನ್ನು ಸೂಚಿಸುತ್ತದೆ.
ರಸ್ತೆಗಳು ಮತ್ತು ಹೆದ್ದಾರಿಗಳು
- ದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ಜಾಲದ ಉದ್ದವು ಮಾರ್ಚ್ 2019ರಲ್ಲಿದ್ದ 1,32,499 ಕಿ.ಮೀ.ನಿಂದ ಪ್ರಸ್ತುತ 1,46,560 ಕಿ.ಮೀ.ಗೆ ಏರಿದೆ. ನಾಲ್ಕು ಪಥ ಮತ್ತು ಅದಕ್ಕಿಂತ ಹೆಚ್ಚಿನ ಪಥಗಳ ರಾಷ್ಟ್ರೀಯ ಹೆದ್ದಾರಿ ಜಾಲದ ಉದ್ದವು 2019 ರಲ್ಲಿದ್ದ 31,066 ಕಿ.ಮೀ.ನಿಂದ 43,512 ಕಿ.ಮೀ.ಗೆ ಅಂದರೆ, ಒಟ್ಟು 1.4 ಪಟ್ಟು ಹೆಚ್ಚಾಗಿsದೆ.
ಹಿಂದೂ ವಿರೋಧಿ ನೀತಿ, ಗ್ಯಾರಂಟಿ ಹೆಸರಿನಲ್ಲಿ ರಾಜ್ಯಕ್ಕೆ ಅನ್ಯಾಯ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ
ಕೇಂದ್ರ ಸರ್ಕಾರದ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಹಿಗ್ಗಾಮುಗ್ಗಾ ವಾಗ್ಧಾಳಿ








