ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಫೆಬ್ರವರಿ.16ರಂದು 2024-25ನೇ ಸಾಲಿನ ರಾಜ್ಯ ಬಜೆಟ್ ಮಂಡಿಸಲಿದ್ದಾರೆ. ಈ ಹಿನ್ನಲೆಯಲ್ಲಿ ಇದಕ್ಕೂ ಮುನ್ನವೇ ಫೆಬ್ರವರಿ.14ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನು ನಿಗದಿ ಪಡಿಸಲಾಗಿದೆ.
ಈ ಕುರಿತಂತೆ ಸಿಎಂ ಸಿದ್ಧರಾಮಯ್ಯ ಅವರು ಎಲ್ಲಾ ಶಾಸಕಾಂಗ ಪಕ್ಷದ ಸದಸ್ಯರು, ವಿಧಾನಸಭೆ, ಪರಿಷತ್, ಲೋಕಸಭೆ, ರಾಜ್ಯ ಸಭೆ ಹಾಗೂ ಬಾಹ್ಯ ಬೆಂಬಲಿತ ಸದಸ್ಯರಿಗೆ ಪತ್ರ ಬರೆದಿದ್ದಾರೆ. ಆ ಪತ್ರದಲ್ಲಿ ದಿನಾಂಕ: 12-02-2024ರ ಸೋಮವಾರದಿಂದ 23-02-2024ರ ಶುಕ್ರವಾರದವರೆಗೆ 16ನೇ ವಿಧಾನಸಭೆಯ 3ನೇ ಅಧಿವೇಶನವು ಬೆಂಗಳೂರಿನ ವಿಧಾನಸೌಧದಲ್ಲಿ ನಡೆಯುತ್ತಿದ್ದು, ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಸದನದಲ್ಲಿ ಚರ್ಚಿಸಬಹುದಾದ ವಿಷಯಗಳಿಗೆ ಸಂಬಂಧಿಸಿದಂತೆ ಚರ್ಚಿಸಲು ದಿ:14-02-2024ರ ಬುಧವಾರ ಸಂಜೆ 7.00 ಗಂಟೆಗೆ ಅರಮನೆ ರಸ್ತೆಯ ಸಿ.ಓ.ಡಿ. ಕಛೇರಿ ಮುಂಭಾಗದಲ್ಲಿರುವ “ಹೋಟೆಲ್ ಬ್ಯಾಡಿಸನ್ ಬ್ಲೂ (ಏಪ್ರಿಯಾ)” ಇಲ್ಲ ‘ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ’ಯನ್ನು ಕರೆಯಲಾಗಿದೆ ಎಂದು ತಿಳಿಸಿದ್ದಾರೆ.
ಈ ಸಭೆಯಲ್ಲಿ ರಾಜ್ಯ ಕೆ.ಪಿ.ಸಿ.ಸಿ. ಅಧ್ಯಕ್ಷರು ಹಾಗೂ ಮಾನ್ಯ ಉಪ ಮುಖ್ಯಮಂತ್ರಿಗಳಾದ ಡಿ. ಕೆ. ಶಿವಕುಮಾರ್ ರವರು ಹಾಗೂ ವಿಧಾನ ಪಲಷತ್ತಿನ ಸಭಾ ನಾಯಕರಾದ ಮಾನ್ಯ ಶ್ರೀ ಎನ್.ಎಸ್. ಭೋಸರಾಜು ರವರು ಹಾಗೂ ಪಕ್ಷದ ಎಲ್ಲಾ ಕಾರ್ಯಾಧ್ಯಕ್ಷರುಗಳು ಉಪಸ್ಥಿತಲರುತ್ತಾರೆ. ಆದುದರಿಂದ ತಾವುಗಳು ತಪ್ಪದೇ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗವಹಿಸಬೇಕೆಂದು ಕೋರಿದ್ದಾರೆ.
BIG NEWS: ರಾಜ್ಯದ ಸರ್ಕಾರಿ ಕಚೇರಿಯಲ್ಲಿ ‘ಬಸವಣ್ಣ’ನ ಭಾವಚಿತ್ರ ಹಾಕುವುದು ಕಡ್ಡಾಯ – ಸಿಎಂ ಸಿದ್ಧರಾಮಯ್ಯ ಆದೇಶ
‘ನಮ್ಮ ಅವಧಿ’ಯ ಕೆಲಸಗಳನ್ನು ‘ತಮ್ಮ ಸಾಧನೆ’ ಎಂದು ಹೇಳಿಕೊಂಡಿದ್ದಾರೆ- ಬೊಮ್ಮಾಯಿ