*ಅವಿನಾಶ್ ಆರ್ ಭೀಮಸಂದ್ರ
ನವದೆಹಲಿ: ನೂತನ ಕೇಂದ್ರ ಸರ್ಕಾರದ ಬಜೆಟ್ ಅನ್ನು ಇಂದು ವಿತ್ತಸಚಿವೆ ನಿರ್ಮಲ ಸೀತಾರಾಮನ್ ಅವರು ಸಂಸತ್ತು ಭವನದಲ್ಲಿ ಏಳನೇ ಬಾರಿ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಬಜೆಟ್ ಮಂಡನೆ ಮಾಡುತ್ತಿರುವ ವೇಳೆಯಲ್ಲಿ ನಿರ್ಮಾಲ ಸೀತರಾಮನ್ ಅವರು ತಮ್ಮ ಬಜೆಟ್ ಆರಂಭಕ್ಕೂ ಮುನ್ನ ಪ್ರಧಾನಿ ನರೇಂಧ್ರ ಮೋದಿಯವರನ್ನು ಗುಣಗಾನ ಮಾಡಿದರು.
“ಭಾರತದ ಜನರು ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ಮೇಲೆ ನಂಬಿಕೆ ಇಟ್ಟಿದ್ದಾರೆ ಮತ್ತು ಐತಿಹಾಸಿಕ ಮೂರನೇ ಅವಧಿಗೆ ಅದನ್ನು ಮರು ಆಯ್ಕೆ ಮಾಡಿದ್ದಾರೆ” ಎಂದು ಹಣಕಾಸು ಸಚಿವರು ಹೇಳಿದರು. ಮಧ್ಯಂತರ ಬಜೆಟ್ನಲ್ಲಿ ಉಲ್ಲೇಖಿಸಿದಂತೆ, ನಾವು ಬಡವರು, ಮಹಿಳೆಯರು, ಯುವಕರು ಮತ್ತು ರೈತ ಎಂಬ 4 ವಿಭಿನ್ನ ಜಾತಿಗಳ ಮೇಲೆ ಗಮನ ಹರಿಸಬೇಕಾಗಿದೆ / ರೈತರಿಗಾಗಿ, ನಾವು ಎಲ್ಲಾ ಪ್ರಮುಖ ಬೆಳೆಗಳಿಗೆ ಹೆಚ್ಚಿನ ಕನಿಷ್ಠ ಬೆಂಬಲ ಬೆಲೆಗಳನ್ನು ಘೋಷಿಸಿದ್ದೇವೆ. ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು 5 ವರ್ಷಗಳವರೆಗೆ ವಿಸ್ತರಿಸಲಾಗಿದ್ದು, 80 ಕೋಟಿಗೂ ಹೆಚ್ಚು ಜನರಿಗೆ ಪ್ರಯೋಜನವಾಗಿದೆ ಅಂತ ತಿಳಿಸಿದರು. ಇದೇ ವೇಳೆ ಅವರು ಮಾತನಾಡುತ್ತ “ಭಾರತದ ಆರ್ಥಿಕ ಬೆಳವಣಿಗೆಯು ಪ್ರಕಾಶಮಾನವಾದ ಅಪವಾದವಾಗಿ ಮುಂದುವರೆದಿದೆ ಮತ್ತು ಮುಂದಿನ ವರ್ಷಗಳಲ್ಲಿ ಹಾಗೆಯೇ ಇರುತ್ತದೆ. ಭಾರತದ ಹಣದುಬ್ಬರವು ಕಡಿಮೆ ಮತ್ತು ಸ್ಥಿರವಾಗಿ ಮುಂದುವರೆದಿದೆ, ಇದು 4% ಗುರಿಯತ್ತ ಸಾಗುತ್ತಿದೆ ಅಂಥ ತಿಳಿಸಿದರು.
#NirmalaSitharaman #Budget2024 #BudgetSession #BudgetSession2024