ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ (Chief Minister Siddaramaiah ) 2026-27ನೇ ಸಾಲಿನ ಬಹುನಿರೀಕ್ಷೆಯ ಕರ್ನಾಟಕ ಬಜೆಟ್ (Karnataka Budget 2026-27) ಮಂಡಿಸುತ್ತಿದ್ದಾರೆ. ಇದು ಸಿಎಂ ಸಿದ್ದರಾಮಯ್ಯ ಮಂಡಿಸುತ್ತಿರುವ ದಾಖಲೆಯ 17ನೇ ಬಜೆಟ್ ಆಗಿದೆ.
ಬಜೆಟ್ ನಲ್ಲಿ ಮಂಡಿಸುತ್ತಿರುವ ಸಿಎಂ ಸಿದ್ದರಾಮಯ್ಯ, 2026-27ನೇ ಸಾಲಿನ ಅಯವ್ಯಯ ಮಂಡಿಸಲು ಖುಷಿ ಆಗುತ್ತಿದೆ. ನಮ್ಮ ಸರ್ಕಾರವು ಕೋಟ್ಯಾಂತರ ಕುಟುಂಬಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇವೆ ರಾಜ್ಯದಲ್ಲಿ ಗ್ಯಾರಂಟಿ ಮೂಲಕ ದೊಡ್ಡ ಸಾಧನೆ ಮಾಡಿದ್ದೇವೆ ಎಂದರು ಹೇಳಿದ್ದಾರೆ.
ಕರ್ನಾಟಕದ 50 ಕ್ಕೂ ಹೆಚ್ಚು ಉತ್ಪನ್ನಗಳಿಗೆ GI ಮಾನ್ಯತೆ ನೀಡಲಾಗುವುದು. ರಾಜ್ಯದ ಒಟ್ಟು ಸಾಲ 8 ಲಕ್ಷ 24 ಸಾವಿರ 389 ಕೋಟಿ ರೂ. ಇದೆ ಎಂದು ತಿಳಿಸಿದ್ದಾರೆ. ದಲಿತ ಕವಿ ಸಿದ್ದಲಿಂಗಯ್ಯ ಹೆಸರಿನಲ್ಲಿ ಟ್ರಸ್ಟ್ ನಿರ್ಮಿಸಲಾಗುವುದು. ಈ ವರ್ಷ ಬಜೆಟ್ ಗಾತ್ರ 4.48 ಲಕ್ಷ ಕೋಟಿ ರೂ. ಇದೆ ಎಂದು ಹೇಳಿದ್ದಾರೆ.






