ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ( Chief Minister Siddaramaiah ) ಅವರು ಇಂದು ತಮ್ಮ ದಾಖಲೆಯ 16 ನೇ ರಾಜ್ಯ ಬಜೆಟ್-2025-26 ( Karnataka Budget 2025-26 ) ಅನ್ನು ಮಂಡಿಸುತ್ತಿದ್ದು, ಪತ್ರಕರ್ತರಿಗೆ ಮಾಧ್ಯಮ ಸಂಜೀವಿನಿ ಯೋಜನೆ ಘೋಷಿಸಿದ್ದಾರೆ.
ತುಮಕೂರಿನಲ್ಲಿ ನಡೆದ 39ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ನೀಡಿದ್ದ ಭರವಸೆಯಂತೆ ಬಜೆಟ್ ನಲ್ಲಿ ಪತ್ರಕರ್ತರಿಗೆ ಮುಖ್ಯಮಂತ್ರಿ ಮಾಧ್ಯಮ ಸಂಜೀವಿನಿ ಆರೋಗ್ಯ ಯೋಜನೆ ಘೊಷಿಸಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಧನ್ಯವಾದ ತಿಳಿಸಿದ್ದಾರೆ.
ಮಾನ್ಯತೆ ಪತ್ರಕರ್ತರಿಗೆ 5 ಲಕ್ಷ ದವರೆಗೆ ಉಚಿತ ಚಿಕಿತ್ಸೆ. ಪತ್ರಕರ್ತರ ಮಾಸಾಶನ 12 ರಿಂದ 15 ಸಾವಿರಕ್ಕೆ ಹೆಚ್ಚಳ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಇದೇ ಸಂದರ್ಭದಲ್ಲಿ ನಿವೃತ್ತ ಪತ್ರಕರ್ತರ ಮಾಸಾಶನವನ್ನು 12 ಸಾವಿರದಿಂದ 15 ಸಾವಿರಕ್ಕೆ ಮತ್ತು ಅವಲಂಬಿತರಿಗೆ 6ಸಾವಿರದಿಂದ 7500ಕ್ಕೆ ಹೆಚ್ಚಳ ಮಾಡಿರುವುದಕ್ಕೂ ಧನ್ಯವಾದ ತಿಳಿಸಿದ್ದಾರೆ.
ಸಂಘದ ಹಕ್ಕೊತ್ತಾಯಕ್ಕೆ ಸ್ಪಂದಿಸಿ ಈ ನಿಟ್ಟಿನಲ್ಲಿ ಬೇಡಿಕೆ ಈಡೇರಿಸಲು ಸಹಕರ ನೀಡಿದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರಾದ ಕೆ.ವಿ.ಪ್ರಭಾಕರ್ ಮತ್ತು ವಾರ್ತಾ ಇಲಾಖೆ ಆಯುಕ್ತರಾದ ಹೇಮಂತ್ ನಿಂಬಾಳ್ಕರ್ ಅವರಿಗೂ ತಗಡೂರು ಧನ್ಯವಾದ ತಿಳಿಸಿದ್ದಾರೆ.
ಯೋಜನೆ ವಿಸ್ತರಿಸಲಿ: ಆರೋಗ್ಯ ಯೋಜನೆಯನ್ನು ಮಾಧ್ಯಮ ಮಾನ್ಯತೆ ಪಡೆದ ಪತ್ರಕರ್ತರಿಗೆ ಮಾತ್ರ ಸೀಮಿತ ಮಾಡದೆ, ಮುಂದೆ ಎಲ್ಲಾ ಪತ್ರಕರ್ತರಿಗೆ ವಿಸ್ತರಿಸಲಿ ಎಂದು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷರು ಒತ್ತಾಯಿಸಿದ್ದಾರೆ.