ನವದೆಹಲಿ: ಸದ್ಯ ವಿತ್ತ ಸಚಿವೆ ನಿರ್ಮಲ ಸೀತರಾಮನ್ ಅವರು ಮಧ್ಯಂತರ ಬಜೆಟ್ ಅನ್ನು ಮಂಡನೆ ಮಾಡುತ್ತಿದ್ದಾರೆ. ಮುಂಬರುವ ಲೋಕಸಭಾ ಚುನಾವಣಾ ಹಿನ್ನಲೆಯಲ್ಲಿ ಈ ಬಾರಿಯ ಬಜೆಟ್ ಎಲ್ಲರ ಗಮನ ನೆಟ್ಟಿದೆ. ಈ ನಡುವೆ ಇಂದು ನಿರ್ಮಲ ಸೀತಾರಾಮನ್ ಅವರು ಮಂಡನೆ ಮಾಡುತ್ತಿರುವ ಬಜೆಟ್ನಲ್ಲಿ “ನಾವು ಗರೀಬ್, ಮಹಿಲಾಯೆನ್, ಯುವ ಮತ್ತು ಅನ್ನದಾತನ ಬಗ್ಗೆ ಗಮನ ಹರಿಸಬೇಕಾಗಿದೆ; ಅವರ ಅಗತ್ಯತೆಗಳು ಮತ್ತು ಆಕಾಂಕ್ಷೆಗಳು ನಮ್ಮ ಅತ್ಯುನ್ನತ ಆದ್ಯತೆಗಳಾಗಿವೆ” ಎಂದು ಹೇಳಿದರು.
ಆಶಾ ಕಾರ್ಯಕರ್ತೆರಿಗೆ, ಅಂಗನವಾಡಿ ಗುಡ್ನ್ಯೂಸ್ ಆಯುಶ್ಮಾನ್ ಭಾರತ್ ಯೋಜನೆ ಜಾರಿ ಮಾಡುವುದಸಾಗಿ ತಿಳಿಸಿದರು. ಇದೇ ವೇಳೆ ಅವರು ಮಾತನಾಡಿ “ಸ್ಕಿಲ್ ಇಂಡಿಯಾ ಮಿಷನ್ 1.4 ಕೋಟಿ ಯುವಕರಿಗೆ ತರಬೇತಿ ನೀಡಿದೆ, 54 ಲಕ್ಷ ಯುವಕರಿಗೆ ಕೌಶಲ್ಯ ಮತ್ತು ಮರು ಕೌಶಲ್ಯ ನೀಡಿದೆ ಮತ್ತು 3000 ಹೊಸ ಐಟಿಐಗಳನ್ನು ಸ್ಥಾಪಿಸಿದೆ. 7 ಐಐಟಿಗಳು, 16 ಐಐಐಟಿಗಳು, 7 ಐಐಎಂಗಳು, 15 ಏಮ್ಸ್ ಮತ್ತು 390 ವಿಶ್ವವಿದ್ಯಾಲಯಗಳಂತಹ ಹೆಚ್ಚಿನ ಸಂಖ್ಯೆಯ ಸಾಂಸ್ಥಿಕ ಉನ್ನತ ಶಿಕ್ಷಣವನ್ನು ಸ್ಥಾಪಿಸಲಾಗಿದೆ ಅಂತ ತಿಳಿಸಿದರು. ಮೇಲ್ಛಾವಣಿ ಸೌರೀಕರಣದೊಂದಿಗೆ ಒಂದು ಕೋಟಿ ಕುಟುಂಬಗಳಿಗೆ ಪ್ರತಿ ತಿಂಗಳು 300 ಯೂನಿಟ್ ವರೆಗೆ ವಿದ್ಯುತ್ ಸಿಗಲಿದೆ ಅಂತ ಹೇಳಿದರು.