*ಅವಿನಾಶ್ ಆರ್ ಭೀಮಸಂದ್ರ
ನವದೆಹಲಿ: ನೂತನ ಕೇಂದ್ರ ಸರ್ಕಾರದ ಬಜೆಟ್ ಅನ್ನು ಇಂದು ವಿತ್ತಸಚಿವೆ ನಿರ್ಮಲ ಸೀತಾರಾಮನ್ ಅವರು ಸಂಸತ್ತು ಭವನದಲ್ಲಿ ಏಳನೇ ಬಾರಿ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಬಜೆಟ್ ಮಂಡನೆ ಮಾಡುತ್ತಿರುವ ವೇಳೆಯಲ್ಲಿ ನಿರ್ಮಾಲ ಸೀತರಾಮನ್ ಅವರು ತಮ್ಮ ಬಜೆಟ್ ಆರಂಭಕ್ಕೂ ಮುನ್ನ ಪ್ರಧಾನಿ ನರೇಂಧ್ರ ಮೋದಿಯವರನ್ನು ಗುಣಗಾನ ಮಾಡಿದರು.
ಮೋದಿ ಸರ್ಕಾರದ ಇಂಟರ್ನ್ಶಿಪ್ ಯೋಜನೆಯಿಂದ ಒಂದು ಕೋಟಿಗೂ ಹೆಚ್ಚು ಯುವಕರು ಪ್ರಯೋಜನ ಪಡೆಯಲಿದ್ದಾರೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
2024-25ರ ಕೇಂದ್ರ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್, ಹೊಸ ಯೋಜನೆಯಡಿ 5,000 ರೂ.ಗಳ ಇಂಟರ್ನ್ಶಿಪ್ ಭತ್ಯೆ ಮತ್ತು 6,000 ರೂ.ಗಳ ಒಂದು ಬಾರಿಯ ಸಹಾಯವನ್ನು ನೀಡಲಾಗುವುದು ಎಂದು ಹೇಳಿದರು.
ಇಂಟರ್ನ್ಶಿಪ್ಗೆ ಅನುಕೂಲ ಮಾಡಿಕೊಡುವ ಕಂಪನಿಗಳು ಇಂಟರ್ನ್ಗಳಿಗೆ ತರಬೇತಿ ನೀಡುವ ವೆಚ್ಚವನ್ನು ಭರಿಸುತ್ತವೆ ಮತ್ತು ಅದಕ್ಕಾಗಿ ತಮ್ಮ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್ಆರ್) ನಿಧಿಯನ್ನು ಬಳಸುತ್ತವೆ.