ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಕಚೇರಿ ಮೇಲೆ ಪಾಕಿಸ್ತಾನದ ನಂಬರ್ ನಿಂದ ದಾಳಿ ನಡೆಸುವುದಾಗಿ ಮುಂಬೈ ಟ್ರಾಫಿಕ್ ಪೊಲೀಸರಿಗೆ ವಾಟ್ಸಾಪ್ ಬೆದರಿಕೆ ಬಂದಿದೆ. ವರ್ಲಿ ಪೊಲೀಸರು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಸಂಚಾರ ಪೊಲೀಸರಿಗೆ ಬುಧವಾರ ಮಧ್ಯಾಹ್ನ ಪಾಕಿಸ್ತಾನದ ಸಂಖ್ಯೆಯಿಂದ ವಾಟ್ಸಾಪ್ನಲ್ಲಿ ಈ ಬೆದರಿಕೆ ಸಂದೇಶ ಬಂದಿದೆ. ಸಂದೇಶವನ್ನು ಕಳುಹಿಸುವ ವ್ಯಕ್ತಿ ತನ್ನನ್ನು ಮಲಿಕ್ ಶಹಬಾಜ್ ಹುಮಾಯೂನ್ ರಾಜಾ ದೇವ್ ಎಂದು ಹೇಳಿಕೊಂಡಿದ್ದಾನೆ.ಕಳುಹಿಸಿದವರು ಭಾರತೀಯರೇ ಅಥವಾ ವಿದೇಶಿಯರೇ ಎಂದು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ