ಚಾಮರಾಜನಗರ: ಅತ್ತಿಗೆಯ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದಂತ ತಮ್ಮನನ್ನು, ಅಣ್ಣ ಎಚ್ಚರಿಸಿದ್ದನು. ಅಲ್ಲದೇ ಬುದ್ಧಿವಾದ ಕೂಡ ಹೇಳಿದ್ದಾರೆ. ಇದೇ ವಿಚಾರಕ್ಕೆ ಜಗಳ ಉಂಟಾಗಿ, ಅತ್ತಿಗೆ ಜೊತೆಗಿನ ಅಕ್ರಮಕ್ಕೆ, ಅಣ್ಣನನ್ನೇ ಚಾಕುವಿನಿಂದ ಇರಿದು ಹತ್ಯೆಗೈದಿರುವ ಘಟನೆ ಚಾಮರಾಜನಗರ ಚೌಡಳ್ಳಿಯಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಚೌಡಳ್ಳಿಯಲ್ಲಿ ತಮ್ಮ ಕುಮಾರ್, ತನ್ನ ಅಣ್ಣನಾದಂತ ಪ್ರಸಾದ್ ಪತ್ನಿಯ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಅತ್ತಿಗೆಯ ಜೊತೆಗಿನ ಅಕ್ರಮ ಸಂಬಂಧ ಅಣ್ಣನಿಗೆ ತಿಳುಯುತ್ತಿದ್ದಂತೆ, ತಮ್ಮನ ವಿರುದ್ಧ ಕೆಂಡಾಮಂಡಲವಾಗಿದ್ದರು.
ಅಣ್ಣ ಪ್ರಸಾದ್, ತನ್ನ ತಮ್ಮ ಕುಮಾರ್ ಗೆ ಅತ್ತಿಗೆಯ ಜೊತೆಗಿನ ಅಕ್ರಮ ಸಂಬಂಧದ ಬಗ್ಗೆ ಎಚ್ಚರಿಸಿದ್ದರು. ಜೊತೆಗೆ ಇದು ಸರಿಯಲ್ಲ ಅಂತ ಖಡಕ್ ವಾರ್ನಿಂಗ್ ಕೂಡ ಮಾಡಿದ್ದರು. ಇದಕ್ಕೂ ಲೆಕ್ಕಿಸದೇ ಅತ್ತಿಗೆ ಮತ್ತು ತಮ್ಮ ಅಕ್ರಮ ಸಂಬಂಧ ಮುಂದುವರೆಸಿದ್ದರು ಎನ್ನಲಾಗುತ್ತಿದೆ.
ಈ ವಿಚಾರಕ್ಕಾಗಿ ಅಣ್ಣ ಮತ್ತು ತಮ್ಮನ ನಡುವೆ ಗಲಾಟೆಯಾಗಿದೆ. ಗಲಾಟೆ ತಾರಕ್ಕೇರಿ, ತಮ್ಮ ಕುಮಾರ್, ತನ್ನ ಅಣ್ಣ ಪ್ರಸಾದ್(45) ಎಂಬುವರನ್ನು ಚಾಕುವಿನಿಂದ ಇರಿದು ಹತ್ಯೆಗೈದಿದ್ದಾನೆ. ಆರೋಪಿಯನ್ನು ಗುಂಡ್ಲುಪೇಟೆ ಠಾಣೆಯ ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
BREAKING : ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತನ ಮನೆ, ತೃಣಮೂಲ ಕಾಂಗ್ರೆಸ್ ಕಚೇರಿ ಮೇಲೆ ಬಾಂಬ್ ದಾಳಿ!