ಬೆಂಗಳೂರು: ನಗರದಲ್ಲಿ ತಾಯಿಗೆ ಬೈದಿದ್ದರಿಂದ ಸಿಟ್ಟುಗೊಂಡಂತ ಅಣ್ಣನನ್ನೇ ತಮ್ಮನೊಬ್ಬ ಕೊಲೆಗೈದ ಘಟನೆ ನಡೆದಿದೆ.
ಬೆಂಗಳೂರಿನ ಯಾರಬ್ ನಗರದ ಮೊಹಮ್ಮದ್ ಮುಜಾಹಿದ್(35) ಎಂಬಾತನೇ ಕೊಲೆಯಾದ ಅಣ್ಣನಾಗಿದ್ದಾನೆ. ಮುಜಾಹಿದ್ ನ ತಮ್ಮ ಮೊಹಮ್ಮದ್ ಮುಸೇದ್ ನಿಂದ ಈ ಕೃತ್ಯವನ್ನು ಎಸಗಲಾಗಿದೆ.
ತಾಯಿಗೆ ಬೈದ ವಿಚಾರಕ್ಕೆ ಅಣ್ಣ-ತಮ್ಮನ ನಡುವೆ ಹೊಡೆದಾಟ ಉಂಟಾಗಿತ್ತು. ಮನೆಯಲ್ಲಿದ್ದ ವಸ್ತುಗಳಿಂದ ಇದೇ ವಿಚಾರಕ್ಕೆ ಸಹೋದರರು ಹೊಡೆದಾಡಿಕೊಂಡಿದ್ದರು. ಹೊಡೆದಾಟದಲ್ಲಿ ಮುಜಾಹಿದ್ ನನ್ನು ಮುಸೇದ್ ತೀವ್ರವಾಗಿ ಹಲ್ಲೆ ಮಾಡಿದ್ದನು.
ಹೊಡೆದಾಟದಲ್ಲಿ ಅಣ್ಣ ಮುಜಾಹಿದ್ ನನ್ನು ತಮ್ಮ ಮುಸೇದ್ ತೀವ್ರವಾಗಿ ಗಾಯಗೊಳಿಸಿದ್ದನು. ಗಾಯಗೊಂಡ ಮುಸೇದ್ ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದು, ಈ ಸಂಬಂಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BREAKING: ದೆಹಲಿ ಗಲಭೆ ಪ್ರಕರಣದ ಆರೋಪಿ ‘ಉಮರ್ ಖಾಲಿದ್’ಗೆ ಜಾಮೀನು ಮಂಜೂರು
ಚಳಿಗಾಲದಲ್ಲಿಯೇ ಹೃದಯಾಘಾತ ಹೆಚ್ಚೇಕೆ? ಅಪಾಯಗಳನ್ನು ತಪ್ಪಿಸಲು ತಜ್ಞರು ನೀಡಿದ ಟಾಪ್ 5 ಸಲಹೆಗಳು!








