ಕ್ಯಾಲಿಫೋರ್ನಿಯಾ: ಖ್ಯಾತ ಅಂತರಾಷ್ಟ್ರೀಯ ಪಾಪ್ ಗಾಯಕಿ ಬ್ರಿಟ್ನಿ ಸ್ಪಿಯರ್ಸ್ (Britney Spears) ಅವರನ್ನು ಮದ್ಯಪಾನ ಮಾಡಿ ವಾಹನ ಚಲಾಯಿಸಿದ (DUI) ಶಂಕೆಯ ಮೇಲೆ ಕ್ಯಾಲಿಫೋರ್ನಿಯಾ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಬುಧವಾರ ತಡರಾತ್ರಿ ಬ್ರಿಟ್ನಿ ಸ್ಪಿಯರ್ಸ್ ಚಲಾಯಿಸುತ್ತಿದ್ದ ವಾಹನವನ್ನು ತಡೆದ ಪೊಲೀಸರು, ಅವರು ಅಮಲಿನಲ್ಲಿರುವುದನ್ನು ಗಮನಿಸಿ ವಶಕ್ಕೆ ಪಡೆದಿದ್ದಾರೆ. ಸ್ಥಳೀಯ ಪೊಲೀಸ್ ಕೇಂದ್ರದಲ್ಲಿ ಅವರನ್ನು ವಿಚಾರಣೆಗೊಳಪಡಿಸಿ, ದಾಖಲೆಗಳನ್ನು ಪೂರೈಸಿದ ನಂತರ ಬಿಡುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಇನ್ನೂ ಅಧಿಕೃತವಾಗಿ ಚಾರ್ಜ್‌ಶೀಟ್ ಸಲ್ಲಿಕೆಯಾಗಿಲ್ಲ. ಸದ್ಯ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಖ್ಯಾತಿಯ ಹಿನ್ನೆಲೆ: 90ರ ದಶಕದ ಅಂತ್ಯದಲ್ಲಿ ‘…Baby One More Time’ ಮತ್ತು ‘Toxic’ ನಂತಹ ಜಗತ್ಪ್ರಸಿದ್ಧ ಹಾಡುಗಳ ಮೂಲಕ ಬ್ರಿಟ್ನಿ ಸ್ಪಿಯರ್ಸ್ ಜಾಗತಿಕವಾಗಿ ಮನೆಮಾತಾಗಿದ್ದರು. ತಮ್ಮ ವೃತ್ತಿಜೀವನದುದ್ದಕ್ಕೂ ಅಪಾರ ಜನಪ್ರಿಯತೆ ಗಳಿಸಿರುವ ಅವರು, ಹಲವು ಬಾರಿ ವೈಯಕ್ತಿಕ ಕಾರಣಗಳಿಂದಾಗಿ ಸುದ್ದಿಯಲ್ಲಿದ್ದರು. ಇದೀಗ ಈ ಬಂಧನದ ಘಟನೆ ಅವರ ಅಭಿಮಾನಿಗಳಲ್ಲಿ ಮತ್ತು ಸಂಗೀತ ಲೋಕದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
BREAKING: ಅಸ್ಸಾಂನಲ್ಲಿ ರೇಡಾರ್ ಸಂಪರ್ಕ ಕಳೆದುಕೊಂಡ ಸುಖೋಯ್-30MKI ಯುದ್ಧ ವಿಮಾನ; ಶೋಧ ಕಾರ್ಯ ಆರಂಭ
SSLC, PUC ಪಾಸಾಗಲು ಎಷ್ಟು ಅಂಕ ಪಡೆಯಬೇಕು? ಇಲ್ಲಿದೆ ಮಂಡಳಿಯ ಅಧಿಕೃತ ಮಾಹಿತಿ








