ಕಾನ್ಪುರ: ಇಲ್ಲಿನ ನೌಬಸ್ತಾದಲ್ಲಿ, ವರದಕ್ಷಿಣೆ ಕೇಸ್‌ನಲ್ಲಿ ಪತಿ ಸೇರಿದಂತೆ ಅತ್ತೆ ಮಾವಂದಿರ ವಿರುದ್ಧ ಗಂಭೀರ ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ಅತ್ತೆ-ಮಾವಂದಿರು ಹೆಚ್ಚುವರಿಯಾಗಿ ಐದು ಲಕ್ಷ ರೂಪಾಯಿ ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ. ನಿರಾಕರಿಸಿದಾಗ, ಪತಿ ತನ್ನ ಸಹೋದರನೊಂದಿಗೆ ಸಂಬಂಧ ಹೊಂದಲು ಪತ್ನಿ ಮೇಲೆ ಒತ್ತಡ ಹೇರಿದನು ಎನ್ನಲಾಗಿದೆ. ಸದ್ಯ ಈ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ನೌಬಸ್ತಾ ನಿವಾಸಿಯಾದ ಸಂತ್ರಸ್ತೆಯ ಸಹೋದರನ ಪ್ರಕಾರ, ಸಹೋದರಿ ಜನವರಿ 15, 2023 ರಂದು ವಿವಾಹವಾಗಿದ್ದರು. ಮದುವೆಯಾದ ಸ್ವಲ್ಪ ಸಮಯದ ನಂತರ, ಅತ್ತೆ ಮಾವಂದಿರು ಹೆಚ್ಚುವರಿ 5 ಲಕ್ಷ ರೂ.ಗಳ ವರದಕ್ಷಿಣೆಯನ್ನು ಒತ್ತಾಯಿಸಲು ಪ್ರಾರಂಭಿಸಿದರು ಎನ್ನಲಾಗಿದೆ. ಇದಲ್ಲದೇ ಹಣ ತಾರದೇ ಹಿನ್ನಲೆಯಲ್ಲಿ ತನ್ನ ಸಹೋದರನೊಂದಿಗೆ ಸಂಬಂಧ ಹೊಂದಲು ಪತಿ ಹೆಂಡ್ತಿ ಮೇಲೆ ಒತ್ತಡ ಹೇರಿದ್ದಾನೆ ಮತ್ತು ಇಬ್ಬರನ್ನೂ ಬಲವಂತವಾಗಿ ಕೋಣೆಯಲ್ಲಿ ಲಾಕ್ ಮಾಡಿದ್ದಾನೆ ಎಂದು ಸಹೋದರ ಆರೋಪಿಸಿದ್ದಾರೆ. ಯಾರಿಗಾದರೂ ಹೇಳಿದರೆ ಬೆಂಕಿ ಹಚ್ಚಿ ಕೊಲ್ಲುವುದಾಗಿ ಬೆದರಿಕೆ ಹಾಕಿದರು. ಪತಿ ಮತ್ತು ಅವನ ಸಹೋದರ ಒಟ್ಟಾಗಿ ಸಹೋದರಿಯ ಹೊಟ್ಟೆಗೆ ಒದೆದರು, ಇದರಿಂದಾಗಿ ಅವಳಿಗೆ ಅಬಾಶನ್ ಆಗಿದೆ ಅಂತ ಆರೋಪಿಸಿದ್ದಾರೆ. . ವರದಕ್ಷಿಣೆ ನಿಷೇಧ ಕಾಯ್ದೆಯ ಸೆಕ್ಷನ್ 3 ಮತ್ತು 4, ಹಲ್ಲೆ, ಕಿರುಕುಳ, ಗರ್ಭಪಾತ ಮತ್ತು ವರದಕ್ಷಿಣೆ ನಿಷೇಧದ ಅಡಿಯಲ್ಲಿ ಸಂತ್ರಸ್ತೆಯ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಲಾಗಿದೆ ಎಂದು ಇನ್ಸ್ಪೆಕ್ಟರ್ ನೌಬಸ್ತಾ ಜೆಪಿ ಪಾಂಡೆ ತಿಳಿಸಿದ್ದಾರೆ.