ನವದೆಹಲಿ: ಖ್ಯಾತ ಗಾಯಕಿ ಅನುರಾಧಾ ಪೌಡ್ವಾಲ್ ಅವರು 2024 ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಶನಿವಾರ ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರಿದರು. ವರದಿಗಳ ಪ್ರಕಾರ, ಅನುರಾಧಾ ಪೌಡ್ವಾಲ್ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ನಲ್ಲಿ ಸ್ಪರ್ಧಿಸಬಹುದು. ಬಿಜೆಪಿ ಸಂಸದ ಅನಿಲ್ ಬಲೂನಿ ಮತ್ತು ಇತರ ನಾಯಕರು ಹೂಗುಚ್ಛ ಮತ್ತು ಪ್ರಾಥಮಿಕ ಸದಸ್ಯತ್ವದ ಪ್ರಮಾಣಪತ್ರದೊಂದಿಗೆ ಅವರನ್ನು ಪಕ್ಷಕ್ಕೆ ಸ್ವಾಗತಿಸಿದರು.
ರಾಮ ಮಂದಿರದ ಉದ್ಘಾಟನೆಯ ಸಂದರ್ಭದಲ್ಲಿ ಅನುರಾಧಾ ಮೌದ್ವಾಲ್ ರಾಮ ಭಜನೆಯನ್ನು ಹಾಡಿದ್ದರು.
#WATCH | Famous singer Anuradha Paudwal joins the Bharatiya Janata Party in Delhi pic.twitter.com/SBFSVLjVU8
— ANI (@ANI) March 16, 2024