ಬೆಂಗಳೂರು : ಮೂರಂತಸ್ತಿನ ಫಿಟ್ನೇಸ್ ಸೆಂಟರ್ ಕಟ್ಟಡದಿಂದ ಬಿದ್ದು ಯುವತಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಕಡಬಗೆರೆಯಲ್ಲಿ ನಡೆದಿದೆ.
ಜುನಿಪರ್ ಫಿಟ್ನೆಸ್ ಸೆಂಟರ್ ಕಟ್ಟಡದಿಂದ ಬಿದ್ದು 20 ವರ್ಷದ ರಕ್ಷಿತಾ ಸಾವನ್ನಪ್ಪಿದ್ದಾರೆ. ಎಂಟು ತಿಂಗಳಿಂದ ರಕ್ಷಿತಾ ಕೆಲಸ ಮಾಡುತ್ತಿದ್ದರು.
ಮೂರನೇ ಮಹಡಿಯಲ್ಲಿದ್ದ ಫಿಟ್ನೆಸ್ ಸೆಂಟರ್ ಕಟ್ಟಡದ ಮೇಲಿನಿಂದ ಬಿದ್ದು ರಕ್ಷಿತಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.