ಧಾರವಾಡ : ಧಾರವಾಡದಲ್ಲಿ ಯುವತಿಯ ಬರ್ಬರ ಹತ್ಯೆ ಮಾಡಲಾಗಿದ್ದು, ಹತ್ಯೆ ಮಾಡಿ ಮೃತದೇಹವನ್ನು ತಂದು ಬಿಸಾಡಿರುವ ಶಂಕೆ ವ್ಯಕ್ತವಾಗಿದೆ.
ಧಾರವಾಡದ ಹೊರ ವಲಯದಲ್ಲಿ ಯುವತಿಯ ಶವ ಪತ್ತೆಯಾಗಿದ್ದು, 19 ವರ್ಷದ ಝಕಿಯಾ ಮುಲ್ಲಾ ಹತ್ಯೆಯಾಗಿರುವ ಯುವತಿ ಎಂದು ಗುರುತಿಸಲಾಗಿದೆ.
ಝಕಿಯಾ ಧಾರವಾಡದ ಗಾಂಧಿ ಚೌಕ್ ಬಡಾವಣೆಯ ನಿವಾಸಿಯಾಗಿದ್ದು, ದುಷ್ಕರ್ಮಿಗಳು ಯುವತಿಯನ್ನು ಹತ್ಯೆಗೈದು ಶವ ತಂದು ಬಿಸಾಡಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.








