ನವದೆಹಲಿ: ಟ್ವಿಟರ್ ಸ್ಥಗಿತದ ಕೆಲವೇ ವಾರಗಳ ನಂತರ, ಎಲೋನ್ ಮಸ್ಕ್ ಒಡೆತನದ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್ (ಹಿಂದೆ ಟ್ವಿಟರ್) ಮಂಗಳವಾರ ಮತ್ತೆ ಸರ್ವರ್ ಡೌನ್ ಆಗಿರುವ ಬಗ್ಗೆ ವರದಿ ಬರುತ್ತಿದ್ದಾವೆ.
ಎಕ್ಸ್ ಸ್ಥಗಿತ ಟ್ರ್ಯಾಕಿಂಗ್ ವೆಬ್ಸೈಟ್ Downdetector.com ಪ್ರಕಾರ, ಭಾರತದಲ್ಲಿ ನೂರಾರು ಬಳಕೆದಾರರು ಎಕ್ಸ್ ಅನ್ನು ಪ್ರವೇಶಿಸುವಲ್ಲಿ, ಬಳಕೆ ಮಾಡುವಲ್ಲಿ ಸಮಸ್ಯೆಗಳನ್ನು ಎದುರಿಸಿದ್ದಾರೆ. ಜಾಗತಿಕವಾಗಿ, 5,000 ಕ್ಕೂ ಹೆಚ್ಚು ಬಳಕೆದಾರರು ಎಕ್ಸ್ ಅನ್ನು ಪ್ರವೇಶಿಸಲು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಡೌನ್ಡೆಟೆಕ್ಟರ್ ಸೂಚಿಸಿದೆ. ಸಂಜೆ 7:00 ರ ಸುಮಾರಿಗೆ ವೆಬ್ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್ ಎರಡೂ ತಾಂತ್ರಿಕ ಸಮಸ್ಯೆಗಳನ್ನು ಎದುರಿಸಲು ಪ್ರಾರಂಭಿಸಿದವು ಎಂದು ಸ್ಥಗಿತ ಟ್ರ್ಯಾಕಿಂಗ್ ವೆಬ್ಸೈಟ್ ವರದಿ ಮಾಡಿದೆ. ಸರಿಸುಮಾರು 76% ಬಳಕೆದಾರರು ಎಕ್ಸ್ ವೆಬ್ಸೈಟ್ ಅನ್ನು ಪ್ರವೇಶಿಸಲು ಸಮಸ್ಯೆಗಳನ್ನು ಹೊಂದಿದ್ದರೆ, 17% ಜನರು ಎಕ್ಸ್ ಅಪ್ಲಿಕೇಶನ್ನೊಂದಿಗೆ ಸಮಸ್ಯೆಗಳನ್ನು ಅನುಭವಿಸಿದರು ಎನ್ನಲಾಗಿದೆ.