ಬೆಂಗಳೂರು : ಬೆಂಗಳೂರಿನ ಬಾಗಲಗುಂಟೆಯಲ್ಲಿ ನೇಣು ಬಿಗಿದುಕೊಂಡು ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಬೆಂಗಳೂರಿನ ಬಾಗಲಗುಂಟೆಯ ನಿವಾಸಿ ನವೀನ್ ಪತ್ನಿ ಐಶ್ವರ್ಯ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪತಿ ನವೀನ್ ಪತ್ನಿಗೆ ವಿಷಯ ತಿಳಿಸದೇ ಧರ್ಮಸ್ಥಳಕ್ಕೆ ಟ್ರಿಪ್ ಗೆ ತೆರಳಿದ್ದ ಹಿನ್ನೆಲೆಯಲ್ಲಿ ಗಲಾಟೆಯಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ನವೀನ್ ಧರ್ಮಸ್ಥಳಕ್ಕೆ ಹೇಳದ ಹೋಗಿದ್ದಾರೆ ಎಂದು ಪತ್ನಿ ಐಶ್ವರ್ಯಾ ಗಲಾಟೆ ಮಾಡಿದ್ದಾಳೆ. ಬಳಿಕ ಮನೆಯ ರೂಮ್ ಗೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.