ನವದೆಹಲಿ : ನವೆಂಬರ್ 25 ರಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ಡಿಸೆಂಬರ್ 20 ರವರೆಗೆ ನಡೆಯಲಿದೆ. ಈ ಅವಧಿಯಲ್ಲಿ ಹಲವು ಮಹತ್ವದ ಮಸೂದೆಗಳ ಕುರಿತು ಚರ್ಚೆ ನಡೆಯಲಿದೆ.
ವರದಿಗಳ ಪ್ರಕಾರ, ಈ ಬಾರಿ ವಿಶೇಷ ಕಾರ್ಯಕ್ರಮ ನಡೆಯಲಿದ್ದು, ಇದರಲ್ಲಿ ಸಂಸದರು ಹಳೆಯ ಸಂಸತ್ತಿನ ಕಟ್ಟಡದಲ್ಲಿ ಒಂದು ದಿನ ಭೇಟಿಯಾಗಬಹುದು.
ಸಂವಿಧಾನವನ್ನು ಅಂಗೀಕರಿಸಿದ 75 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ, ನವೆಂಬರ್ 26 ರಂದು ಲೋಕಸಭೆ ಮತ್ತು ರಾಜ್ಯಸಭೆಯ ಜಂಟಿ ಅಧಿವೇಶನವನ್ನು ಕರೆಯಲಾಗಿದೆ. ಈ ವಿಶೇಷ ಅಧಿವೇಶನವು ನವೆಂಬರ್ 26, 1949ರಂದು ಭಾರತೀಯ ಸಂವಿಧಾನವನ್ನು ಅಂಗೀಕರಿಸಿದ ಹಳೆಯ ಸಂಸತ್ ಭವನದ ಸೆಂಟ್ರಲ್ ಹಾಲ್ನಲ್ಲಿ ನಡೆಯಲಿದೆ. ಈ ದಿನವನ್ನ ಸಂವಿಧಾನ ದಿನವಾಗಿ ಆಚರಿಸಲಾಗುತ್ತದೆ ಮತ್ತು ಭಾರತೀಯ ಸಂವಿಧಾನವು ಜನವರಿ 26, 1950 ರಿಂದ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬಂದಿತು.
ಕುತೂಹಲಕಾರಿ ಸಂಗತಿಯೆಂದರೆ, ಆಡಳಿತಾರೂಢ ಎನ್ಡಿಎ ಮತ್ತು ಪ್ರತಿಪಕ್ಷಗಳ ಮೈತ್ರಿಕೂಟ ಎರಡೂ ತಮ್ಮನ್ನು ಸಂವಿಧಾನದ ರಕ್ಷಕರು ಎಂದು ಬಿಂಬಿಸಲು ಪ್ರಯತ್ನಿಸುತ್ತಿವೆ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪರಸ್ಪರರನ್ನ ಸಂವಿಧಾನದ ಶತ್ರುಗಳು ಎಂದು ಕರೆಯಲು ಯಾವುದೇ ಅವಕಾಶವನ್ನ ಬಿಡುವುದಿಲ್ಲ. ಈ ಲೋಕಸಭಾ ಚುನಾವಣೆಯಲ್ಲಿ, ಮೋದಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ, ಸಂವಿಧಾನಕ್ಕೆ ಅಪಾಯವಿದೆ ಎಂಬ ನಿರೂಪಣೆಯನ್ನ ಪ್ರಚಾರ ಮಾಡಲು ಪ್ರತಿಪಕ್ಷಗಳು ಪ್ರಯತ್ನಿಸಿದವು. ಅದೇ ಸಮಯದಲ್ಲಿ, ಮೋದಿ ಸರ್ಕಾರವು ಈ ವರ್ಷದ ಜುಲೈನಲ್ಲಿ ಜೂನ್ 25 ಸಾಂವಿಧಾನಿಕ ಹತ್ಯಾ ದಿವಸ್ ಎಂದು ಆಚರಿಸುವುದಾಗಿ ಘೋಷಿಸಿತು, ಇದರಿಂದ ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ನೆನಪಿಸಿಕೊಳ್ಳಬಹುದು.
ಗಮನಿಸಿ : ನೀವು ಈ ‘ಔಷಧಿ’ಗಳನ್ನ ಬಳಸುತ್ತಿದ್ದೀರಾ.? ಹಾಗಿದ್ರೆ, ಜಾಗ್ರತೆ..!
BREAKING: ಇಂದು ಬೆಂಗಳೂರಲ್ಲಿ ಪಟಾಕಿ ಸಿಡಿದು 9 ಮಂದಿಗೆ ಗಾಯ: ಮಿಂಟೋ ಆಸ್ಪತ್ರೆಗೆ ದಾಖಲು
BREAKING : ಕೇಂದ್ರ ಸಚಿವ ‘ಅಮಿತ್ ಶಾ’ ವಿರುದ್ಧದ ಆರೋಪ ; ‘ಕೆನಡಾ ಅಧಿಕಾರಿ’ಗೆ ಭಾರತ ಸಮನ್ಸ್