ನವದೆಹಲಿ : ತಾಂತ್ರಿಕ ಸಮಸ್ಯೆಯಿಂದ ಸ್ಥಗಿತಗೊಂಡಿದ್ದ ಮೆಟಾ ಸಂಸ್ಥೆಯ ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್, ಫೇಸ್ ಬುಕ್ ಮತ್ತು ಇನ್ಸ್ಟಾಗ್ರಾಮ್ ಸೇವೆಗಳು ಮತ್ತೆ ಸಹಜ ಸ್ಥಿತಿಗೆ ಮರಳಿವೆ.
ಬುಧವಾರ ರಾತ್ರಿ 11 ಗಂಟೆ ಸುಮಾರಿಗೆ ವಾಟ್ಸಾಪ್, ಫೇಸ್ ಬುಕ್ ಮತ್ತು ಇನ್ಸ್ಟಾಗ್ರಾಮ್ ಸೇವೆಗಳು ವಿಶ್ವವ್ಯಾಪಿ ಸ್ಥಗಿತಗೊಂಡಿದ್ದು, ಬಳಕೆದಾರರು ಪರದಾಡಿದ್ದಾರೆ. ಅನೇಕ ವಾಟ್ಸಪ್ ಬಳಕೆದಾರರು ಸಂದೇಶಗಳನ್ನು ಸ್ವೀಕರಿಸಲು ಮತ್ತು ಕಳುಹಿಸಲು ತೊಂದರೆಯಾಗಿರುವುದಾಗಿ ವರದಿ ಮಾಡಿದ್ದಾರೆ. ವಾಟ್ಸಾಪ್ ವೆಬ್, ಫೇಸ್ಬುಕ್, ಫೇಸ್ಬುಕ್, ಇನ್ ಸ್ಟಾಗ್ರಾಂ ಲಾಗಿನ್ ತಡರಾತ್ರಿವರೆಗೂ ಸರಿಯಾಗುತ್ತಿರಲಿಲ್ಲ ಎಂದು ಬಳಕೆದಾರರು ದೂರಿದ್ದರು. ಸೇವೆಗಳ ಸ್ಥಗಿತದಿಂದಾಗಿ ಒಂದು ಗಂಟೆಗೂ ಹೆಚ್ಚು ಕಾಲ ಆತಂಕ ಸೃಷ್ಟಿಯಾಗಿತ್ತು. ಸರ್ವರ್ ಡೌನ್ ಸಮಸ್ಯೆಯಿಂದಾಗಿ ಸ್ಥಗಿತಗೊಂಡಿದ್ದ ಸೇವೆಗಳು ಇದೀಗ ಸಹಜ ಸ್ಥಿತಿಗೆ ಮರಳಿವೆ ಎಂದು ಮೆಟಾ ಸಂಸ್ಥೆ ಮಾಹಿತಿ ನೀಡಿದೆ.
ಬೆಳಗಿನ ಜಾವ 3:50 ರ ಸುಮಾರಿಗೆ, ಮೆಟಾ ಒಂದು ಅಪ್‌ಡೇಟ್ ಅನ್ನು ನೀಡಿತು, “ನಮ್ಮೊಂದಿಗೆ ಹೊಂದಿದ್ದಕ್ಕಾಗಿ ಧನ್ಯವಾದಗಳು! ನಾವು 99 ಪ್ರತಿಶತದಷ್ಟು ಮಾರ್ಗದಲ್ಲಿದ್ದೇವೆ – ಕೆಲವು ಕೊನೆಯ ತಪಾಸಣೆಗಳನ್ನು ಮಾಡುತ್ತಿದ್ದೇವೆ. ಸ್ಥಗಿತದಿಂದ ತೊಂದರೆಗೊಳಗಾದವರಿಗೆ ನಾವು ಕ್ಷಮೆಯಾಚಿಸುತ್ತೇವೆ ಎಂದು ತಿಳಿಸಿದೆ.