ಬೆಂಗಳೂರು : ಬೆಂಗಳೂರಿನಲ್ಲಿ ಯೂಟ್ಯೂಬ್ ನೋಡಿ ಸರಗಳ್ಳತನ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ನಿತಿನ್ (24) ಹಾಗೂ ಭದ್ರಾವತಿ ಮೂಲದ ಪ್ರಭು (27) ಬಂಧಿತ ಆರೋಪಿಗಳು. ಬೆಂಗಳೂರಿನ ಕೋಣನಕುಂಟೆ ಠಾಣೆ ಪೊಲೀಸರು ಸರಗಳ್ಳರನ್ನು ಬಂಧಿಸಿದ್ದಾರೆ. ಸ್ವಂತ ಬೈಕ್ ಬಳಸಿದರೆ ಸಿಕ್ಕಿಬೀಳುವ ಆತಂಕದಿಂದ ಬಾಡಿಗೆ ಬೈಕ್ ಪಡೆಯುತ್ತಿದ್ದರು.24 ಬನಶಂಕರಿ ಖಾಸಗಿ ಸಂಸ್ಥೆಯಲ್ಲಿ ಬಾಡಿಗೆ ಬೈಕ್ ಪಡೆದು ಕಳ್ಳತನ ಮಾಡುತ್ತಿದ್ದರು.
ಮಾ. 14 ರಂದು ವೆಂಕಟೇಶವರ ಲೇೌಟ್ ನಲ್ಲಿ ಮಹಿಳೆಯ ಸರಗಳ್ಳತನ ಮಾಡಿದ್ದರು. ಕೋಣಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಿತಿನ್ ಬೈಕ್ ಓಡಿಸಿದ್ರೆ, ಪ್ರಭು ಹಿಂದೆ ಕುಳಿತು ಸರಗಳ್ಳತನ ಮಾಡುತ್ತಿದ್ದ. ಒಂಟಿಯಾಗಿ ಓಡಾಡುವ ಮಹಿಳೆಯರನ್ನು ಟಾರ್ಗೆಟ್ ಮಾಡಲಾಗುತ್ತಿತ್ತು. ಸರಗಳ್ಳರ ಬಳಿ 2.8 ಲಕ್ಷ ಮೌಲ್ಯದ ಚಿನ್ನಾಭರಣ, 1.5 ಲಕ್ಷ ರೂ. ಮೌಲ್ಯದ ಪಲ್ಸರ್ ಬೈಕ್ ಜಪ್ತಿ ಮಾಡಲಾಗಿದೆ.