Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Rain Alert : ರಾಜ್ಯದಲ್ಲಿ ಮುಂದಿನ 4 ದಿನ ವರುಣಾರ್ಭಟ: ಸಿಲಿಕಾನ್ ಸಿಟಿ ಸೇರಿದಂತೆ 8 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್!

BREAKING : ರ್ನಾಟಕದ 4 ಸ್ಥಾನ ಸೇರಿ, ರಾಜ್ಯಸಭೆಯ 24 ಸ್ಥಾನಗಳ ಚುನಾವಣೆಗೆ ದಿನಾಂಕ ಘೋಷಣೆ | Rajya Sabha Election

BREAKING : ಕರ್ನಾಟಕದ 4 ಸ್ಥಾನ ಸೇರಿ ರಾಜ್ಯಸಭೆಯ 24 ಸ್ಥಾನಗಳ ಚುನಾವಣೆಗೆ ಮುಹೂರ್ತ ಫಿಕ್ಸ್ : ಕೇಂದ್ರ ಚುನಾವಣಾ ಆಯೋಗದಿಂದ ದಿನಾಂಕ ಘೋಷಣೆ | Rajya Sabha elections

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಪಂಚಭೂತಗಳಲ್ಲಿ ವೃಕ್ಷಮಾತೆ ‘ತುಳಸಿಗೌಡ’ ಲೀನ : ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ | Tulasi Gowda
KARNATAKA

BREAKING : ಪಂಚಭೂತಗಳಲ್ಲಿ ವೃಕ್ಷಮಾತೆ ‘ತುಳಸಿಗೌಡ’ ಲೀನ : ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ | Tulasi Gowda

By kannadanewsnow57

ಉತ್ತರ ಕನ್ನಡ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪರಿಸರ ಪ್ರೇಮಿ ತುಳಸಿಗೌಡ ಅವರ ಅಂತ್ಯಕ್ರಿಯೆಯನ್ನು ಇಂದು ಅವರ ಹುಟ್ಟೂರಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿದೆ.

ಹಾಲಕ್ಕಿ ಸಮುದಾಯದ ಜಾನಪದ ಕಲಾವಿದೆ, ಪದ್ಮಶ್ರೀ ಸುಕ್ರಿ ಬೊಮ್ಮು ಗೌಡ ಅವರ ಬಳಿಕ ಉತ್ತರ ಕನ್ನಡ ಜಿಲ್ಲೆಯಲ್ಲಿ ತನ್ನದೇ ವಿಶಿಷ್ಠ ಸಾಧನೆಯ ಮೂಲಕ ಗಮನ ಸೆಳೆದಿದ್ದೇ ತುಳಸಿ ಗೌಡ. ಇವರು ಪರಿಸರ ಪ್ರೇಮಿ. ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದ ತುಳಸಿ ಗೌಡರ ಸಾಧನೆ ಅಪಾರ. ವೃಕ್ಷಮಾತೆ ಎಂದೆನಿಸಿಕೊಂಡಿರುವ ಈಕೆ ಬೆಳೆಸಿದ ಮರಗಳು ಒಂದಲ್ಲಾ, ಎರಡಲ್ಲಾ.. ಲಕ್ಷಗಟ್ಟಲೇ! ಇವರು ಕಟ್ಟಿಗೆ ಸಂಗ್ರಹಿಸಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ಮತ್ತಿಘಟ್ಟ ಅರಣ್ಯ ನರ್ಸರಿಯಲ್ಲಿ ಸೇವೆ ಮಾಡಿ ನಿವೃತ್ತರಾದರೂ ಈಗಲೂ ಅಲ್ಲಿಗೆ ಹೋಗಿ ಯುವಕರಿಗೆ ತರಬೇತಿ, ಮಾರ್ಗದರ್ಶನ ನೀಡುತ್ತಿದ್ದರು.

ತುಳಸಿ ಕಳೆದ ಆರು ದಶಕಗಳಿಂದ ಈ ಕೆಲಸವನ್ನು ಯಾವುದೇ ಪ್ರತಿಫಲ ನಿರೀಕ್ಷೆ ಇಲ್ಲದೆ ಮಾಡುತ್ತಿದ್ದರು.. ಸ್ಥಳೀಯರು ಹೇಳುವಂತೆ ತುಳಸಿ ಅವರು, ಅರಣ್ಯ ಇಲಾಖೆ ನಡೆಸಿದ ಅರಣ್ಯೀಕರಣ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಅವರ ಸೇವೆಯನ್ನು ಗುರುತಿಸಿ, ಇಲಾಖೆ ಅವರ ಸೇವೆಯನ್ನು ಕ್ರಮಬದ್ಧಗೊಳಿಸಿತ್ತು. ೧೪ ವರ್ಷಗಳ ನಂತರ, ಅವರು ಸೇವೆಯಿಂದ ನಿವೃತ್ತರಾದರು. ಪಿಂಚಣಿ ಅವರ ಜೀವನೋಪಾಯದ ಏಕೈಕ ಮೂಲವಾಗಿತ್ತು.

ತುಳಸಿ ಅವರು ಜನಿಸಿದ್ದು ಬಡತನದಿಂದ ಬಳಲುತ್ತಿದ್ದ ಹಾಲಕ್ಕಿ ಬುಡಕಟ್ಟು ಕುಟುಂಬದಲ್ಲಿ. ಅವರು ಕೇವಲ ಎರಡು ವರ್ಷದಲ್ಲಿದ್ದಾಗ ಅವರ ತಂದೆಯ ಸಾವು ಅವರನ್ನು ತೀವ್ರವಾಗಿ ಬಾಧಿಸಿತ್ತು. ಆ ಬಳಿಕ ಅವರಿಗೆ ಯಾವುದೇ ಔಪಚಾರಿಕ ಶಿಕ್ಷಣ ಸಿಗಲಿಲ್ಲ. ಬಡತನವು ಬಾಲ್ಯದಿಂದಲೂ ದೈನಂದಿನ ಕೂಲಿ ಕಾರ್ಮಿಕರಾದ ತನ್ನ ತಾಯಿಯೊಂದಿಗೆ ಕೆಲಸ ಮಾಡಲು ಪ್ರೇರೇಪಿಸಿತು. ತುಳಸಿ ಚಿಕ್ಕ ವಯಸ್ಸಿನಲ್ಲಿಯೇ ಗೋವಿಂದ ಗೌಡ ಅವರನ್ನು ವಿವಾಹವಾದರು. ಆದರೆ ಅವರು ಕೆಲವೇ ವರ್ಷಗಳಲ್ಲಿ ನಿಧನರಾದರು. ಎಲ್ಲ ದುರ್ಘಟನೆಗಳನ್ನು ಧೈರ್ಯದಿಂದ ಎದುರಿಸಿ ಇಡೀ ರಾಷ್ಟ್ರಕ್ಕೆ ಮಾದರಿಯಾಗಿರುವ ಜೀವನವನ್ನು ನಡೆಸಿದ್ದರು.

ಇಂತಹ ತುಳಸಿಗೌಡ ಅವರ ಪರಿಸರ ಪ್ರೇಮತೆಗೆ ಕೇಂದ್ರ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಕೆಲ ದಿನಗಳಿಂದ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದಂತ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಿಸದೇ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ತುಳಸಿಗೌಡ ನಿನ್ನೆ ನಿಧನರಾಗಿದ್ದರು.

BREAKING : ವೃಕ್ಷಮಾತೆ ‘ತುಳಸಿಗೌಡ’ ಪಂಚಭೂತಗಳಲ್ಲಿ ಲೀನ : ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ | Tulasi Gowda BREAKING: Vriksha Mata 'Tulsi Gowda' immersed in five elements: Cremated with full state honours | Tulasi Gowda
Share. Facebook Twitter LinkedIn WhatsApp Email

Related Posts

Rain Alert : ರಾಜ್ಯದಲ್ಲಿ ಮುಂದಿನ 4 ದಿನ ವರುಣಾರ್ಭಟ: ಸಿಲಿಕಾನ್ ಸಿಟಿ ಸೇರಿದಂತೆ 8 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್!

1 Min Read

BREAKING : ಕರ್ನಾಟಕದ 4 ಸ್ಥಾನ ಸೇರಿ ರಾಜ್ಯಸಭೆಯ 24 ಸ್ಥಾನಗಳ ಚುನಾವಣೆಗೆ ಮುಹೂರ್ತ ಫಿಕ್ಸ್ : ಕೇಂದ್ರ ಚುನಾವಣಾ ಆಯೋಗದಿಂದ ದಿನಾಂಕ ಘೋಷಣೆ | Rajya Sabha elections

1 Min Read

ಕಲಬುರ್ಗಿಯಲ್ಲಿ ಘೋರ ಘಟನೆ : ಗಂಡನ ಕಿರುಕುಳಕ್ಕೆ ಬೇಸತ್ತು 4 ತಿಂಗಳ ಗರ್ಭಿಣಿ ಆತ್ಮಹತ್ಯೆ!

2 Mins Read
Recent News

Rain Alert : ರಾಜ್ಯದಲ್ಲಿ ಮುಂದಿನ 4 ದಿನ ವರುಣಾರ್ಭಟ: ಸಿಲಿಕಾನ್ ಸಿಟಿ ಸೇರಿದಂತೆ 8 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್!

BREAKING : ರ್ನಾಟಕದ 4 ಸ್ಥಾನ ಸೇರಿ, ರಾಜ್ಯಸಭೆಯ 24 ಸ್ಥಾನಗಳ ಚುನಾವಣೆಗೆ ದಿನಾಂಕ ಘೋಷಣೆ | Rajya Sabha Election

BREAKING : ಕರ್ನಾಟಕದ 4 ಸ್ಥಾನ ಸೇರಿ ರಾಜ್ಯಸಭೆಯ 24 ಸ್ಥಾನಗಳ ಚುನಾವಣೆಗೆ ಮುಹೂರ್ತ ಫಿಕ್ಸ್ : ಕೇಂದ್ರ ಚುನಾವಣಾ ಆಯೋಗದಿಂದ ದಿನಾಂಕ ಘೋಷಣೆ | Rajya Sabha elections

ಕಲಬುರ್ಗಿಯಲ್ಲಿ ಘೋರ ಘಟನೆ : ಗಂಡನ ಕಿರುಕುಳಕ್ಕೆ ಬೇಸತ್ತು 4 ತಿಂಗಳ ಗರ್ಭಿಣಿ ಆತ್ಮಹತ್ಯೆ!

State News
KARNATAKA

Rain Alert : ರಾಜ್ಯದಲ್ಲಿ ಮುಂದಿನ 4 ದಿನ ವರುಣಾರ್ಭಟ: ಸಿಲಿಕಾನ್ ಸಿಟಿ ಸೇರಿದಂತೆ 8 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್!

By ಸುರೇಶ್‌ KARNATAKA 1 Min Read

ಬೆಂಗಳೂರು : ಕಳೆದ ಕೆಲವು ದಿನಗಳಿಂದ ತೀವ್ರ ಬಿಸಿಲಿನ ಬೇಗೆ ಹಾಗೂ ಉಷ್ಣಾಂಶದಿಂದ ಕಂಗಾಲಾಗಿದ್ದ ಕರ್ನಾಟಕದ ಜನತೆಗೆ ವರುಣದೇವ ತಂಪು…

BREAKING : ಕರ್ನಾಟಕದ 4 ಸ್ಥಾನ ಸೇರಿ ರಾಜ್ಯಸಭೆಯ 24 ಸ್ಥಾನಗಳ ಚುನಾವಣೆಗೆ ಮುಹೂರ್ತ ಫಿಕ್ಸ್ : ಕೇಂದ್ರ ಚುನಾವಣಾ ಆಯೋಗದಿಂದ ದಿನಾಂಕ ಘೋಷಣೆ | Rajya Sabha elections

ಕಲಬುರ್ಗಿಯಲ್ಲಿ ಘೋರ ಘಟನೆ : ಗಂಡನ ಕಿರುಕುಳಕ್ಕೆ ಬೇಸತ್ತು 4 ತಿಂಗಳ ಗರ್ಭಿಣಿ ಆತ್ಮಹತ್ಯೆ!

GOOD NEWS : ರಾಜ್ಯದ ಸರ್ಕಾರಿ ಪಿಯು ಕಾಲೇಜುಗಳಿಗೆ 6,086 ಅತಿಥಿ ಉಪನ್ಯಾಸಕರ ನೇಮಕಾತಿಗೆ ಸರ್ಕಾರ ಅಸ್ತು

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.