ಬೆಂಗಳೂರು : ಬೆಂಗಳೂರಿನಲ್ಲಿ ಪುಡಿ ರೌಡಿಗಳ ಅಟ್ಟಹಾಸ ಮುಂದುವರೆದಿದ್ದು, ಬೈಕ್ ನಿಧಾನವಾಗಿ ಓಡಿಸು ಅಂದಿದಕ್ಕೆ ಯುವಕನಿಗೆ ಚಾಕು ಇರಿದ ಘಟನೆ ನಡೆದಿದೆ.
ಬೆಂಗಳೂರಿನ ಬಸವೇಶ್ವರ ನಗರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಏಪ್ರೀಲ್ 1 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಚಿರಂಜೀವಿ ಎಂಬ ಯುವಕ ಅತ್ತೆ ಮನೆಗೆ ಊಟ ಕೊಟ್ಟು ವಾಪಸ್ ಬರುವಾಗ ಪುಡಿ ರೌಡಿಗಳ ಅಟ್ಟಹಾಸ ಮೆರೆದಿದ್ದಾರೆ. ಬೈಕ್ ನಿಧಾನವಾಗಿ ಓಡಿಸಿ ಎಂದು ಹೇಳಿದಕ್ಕೆ ಚಿರಂಜೀವಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ಸದ್ಯ ಚಿರಂಜೀವಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.