ನವದೆಹಲಿ : ವಡೋದರಾದ ಕೊತಂಬಿ ಕ್ರೀಡಾಂಗಣದಲ್ಲಿ ನಡೆದ 2024-25ರ ಆವೃತ್ತಿಯ ಫೈನಲ್ ಪಂದ್ಯದಲ್ಲಿ ವಿದರ್ಭವನ್ನ 36 ರನ್ಗಳಿಂದ ಸೋಲಿಸುವ ಮೂಲಕ ಕರ್ನಾಟಕವು ದಾಖಲೆಯ ಐದನೇ ವಿಜಯ್ ಹಜಾರೆ ಟ್ರೋಫಿ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ಮಯಾಂಕ್ ಅಗರ್ವಾಲ್ ನಾಯಕತ್ವದ ಕರ್ನಾಟಕ ತಂಡ ಆಡಿರುವ 7 ಪಂದ್ಯಗಳಲ್ಲಿ 6ರಲ್ಲಿ ಗೆಲುವು ಸಾಧಿಸಿ ಗ್ರೂಪ್ ಹಂತ ತಲುಪಿತ್ತು. ದೇವದತ್ ಪಡಿಕ್ಕಲ್ ನಾಯಕತ್ವದ ಕರ್ನಾಟಕ ತಂಡ ಬರೋಡಾ ಮತ್ತು ಹರ್ಯಾಣ ತಂಡಗಳನ್ನು ಮಣಿಸಿ ಐದು ವರ್ಷಗಳ ಬಳಿಕ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದೆ. ಕುತೂಹಲಕಾರಿ ಸಂಗತಿಯೆಂದರೆ, ಕಳೆದ ನಾಲ್ಕು ಫೈನಲ್ ಪಂದ್ಯಗಳಲ್ಲಿ ಕರ್ನಾಟಕ ಗೆಲುವು ಸಾಧಿಸಿದೆ.
ಯುವ ಆಟಗಾರ ಆರ್.ಸ್ಮರಣ್ ಅವರ ಎರಡನೇ ಲಿಸ್ಟ್ ಎ ಶತಕದ ನೆರವಿನಿಂದ ಕರ್ನಾಟಕ ತಂಡ ಶನಿವಾರ 6 ವಿಕೆಟ್ ನಷ್ಟಕ್ಕೆ 348 ರನ್ ಗಳಿಸಿತ್ತು. ನಾಕೌಟ್ನಲ್ಲಿ ವಿದರ್ಭದ ಆರಂಭಿಕ ಆಟಗಾರ ಧ್ರುವ್ ಶೋರೆ ಸತತ ಮೂರನೇ ಶತಕ ಬಾರಿಸಿದರೂ, ವಿದರ್ಭ ತಂಡವು ಚೇಸಿಂಗ್ನಲ್ಲಿ ವಿಫಲವಾಯಿತು.
ಹೆಚ್ಚಿನ ಆದಾಯದ ದೇಶಗಳಿಗಿಂತ ಭಾರತದಲ್ಲಿ ‘ಶಸ್ತ್ರಚಿಕಿತ್ಸೆ ಸೋಂಕಿನ ಪ್ರಮಾಣ’ ಹೆಚ್ಚು : ‘ICMR’ ಅಧ್ಯಯನ
ಅಡಿಕೆ ಕ್ಯಾನ್ಸರ್ ಕಾರಕವಲ್ಲ ಎಂಬುದನ್ನು ಬಗ್ಗೆ ಸುಪ್ರೀಂ ಕೋರ್ಟ್ ಗೆ ವರದಿ ಸಲ್ಲಿಕೆ: ಶಿವರಾಜ್ ಸಿಂಗ್ ಚೌಹಾಣ್
ಚರ್ಮದ ಮೇಲೆ ಈ ರೀತಿಯ ‘ಲಕ್ಷಣ’ಗಳಿವ್ಯಾ.? ಅಯ್ಯೋ, ನಿಮ್ಮ ‘ಲಿವರ್’ ಅಪಾಯದಲ್ಲಿದೆ ಎಂದರ್ಥ