ಬೆಂಗಳೂರು: ವಾಲ್ಮೀಕಿ ನಿಗಮ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ಚುರುಕುಗೊಳಿಸಿದ್ದು, ಇದೀಗ ಸಿಬಿಐ ಮೂವರು ಆರೋಪಿಗಳಿಗೆ ನೋಟಿಸ್ ನೀಡಿದೆ.
ಸಿಬಿಐ ಪ್ರಕರಣದ ಪ್ರಮುಖ ಆರೋಪಿ ಚಂದ್ರ ಮೋಹನ್ ಮತ್ತು ಕುಟುಂಸ್ಥರಿಗೆ ನೋಟಿಸ್ ನೀಡಿದೆ. ಚಂದ್ರ ಮೋಹನ್ ವಾಲ್ಮೀಕಿ ನಿಗಮದ ಪ್ರಕರಣದಲ್ಲಿ 89 ಕೋಟಿ ವರ್ಗಾವಣೆ ಮಾಡಿದ್ದ ಆರೋಪ ಹೊಂದಿದ್ದಾರೆ.
ಇನ್ನಿಬ್ಬರು ಆರೋಪಿಗಳಾದ ಪರಶುರಾಮ್, ಸತ್ಯನಾರಾಯಣ ಅವರಿಗೆ ಸಿಬಿಐ ಅಧಿಕಾರಿಗಳು ನೋಟಿಸಿದ್ದು, ಇಬ್ಬರ ವಿಚಾರಣೆ ನಡೆಸಿದ್ದಾರೆ.