ನವದೆಹಲಿ : ಬಾಬಾ ರಾಮ್ದೇವ್ ಅವರ ಪತಂಜಲಿ ಆಯುರ್ವೇದ ತಯಾರಿಸಿದ ಸುಮಾರು 15 ಉತ್ಪನ್ನಗಳ ಉತ್ಪಾದನಾ ಪರವಾನಗಿಗಳನ್ನು ಉತ್ತರಾಖಂಡ ಸರ್ಕಾರದ ನಿಯಂತ್ರಕ ಅಮಾನತುಗೊಳಿಸಿದೆ ಎಂದು ಏಪ್ರಿಲ್ 24 ರ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಉತ್ತರಾಖಂಡ ಸರ್ಕಾರದ ಆದೇಶವನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.
ಅವುಗಳ ಪರಿಣಾಮಕಾರಿತ್ವದ ಬಗ್ಗೆ ಪದೇ ಪದೇ ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನ ಪ್ರಕಟಿಸಿದ್ದಕ್ಕಾಗಿ ಪರವಾನಗಿಗಳನ್ನ ತಡೆಹಿಡಿಯಲಾಗಿದೆ ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.
ತಮ್ಮ ಕೆಲವು ಉತ್ಪನ್ನಗಳ ದಾರಿತಪ್ಪಿಸುವ ಜಾಹೀರಾತುಗಳನ್ನ ನಿಲ್ಲಿಸುವಂತೆ ತನ್ನ ನಿರ್ದೇಶನಗಳನ್ನ ಪಾಲಿಸದಿದ್ದಕ್ಕಾಗಿ ಸುಪ್ರೀಂ ಕೋರ್ಟ್ ಇತ್ತೀಚಿನ ವಾರಗಳಲ್ಲಿ ರಾಮ್ದೇವ್ ಅವರನ್ನ ಪದೇ ಪದೇ ಟೀಕಿಸಿದೆ.
ರಾಮ್ದೇವ್ ವಿರುದ್ಧ ನ್ಯಾಯಾಂಗ ನಿಂದನೆ ಆರೋಪಗಳನ್ನ ಹೊರಿಸಬೇಕೇ ಅಥವಾ ಬೇಡವೇ ಎಂದು ನಿರ್ಧರಿಸಲು ಸುಪ್ರೀಂ ಕೋರ್ಟ್ ನಾಳೆ (ಏಪ್ರಿಲ್ 30) ಪತಂಜಲಿ ಪ್ರಕರಣದ ವಿಚಾರಣೆ ನಡೆಸಲಿದೆ.
ಇದು ವಿಶ್ವದ ಅತಿದೊಡ್ಡ ‘ವಿಮಾನ ನಿಲ್ದಾಣ’.! ವೈಶಿಷ್ಟ್ಯಗಳು ತಿಳಿದ್ರೆ, ನೀವೇ ಅಚ್ಚರಿ ಪಡ್ತೀರಿ
ಇದು ವಿಶ್ವದ ಅತಿದೊಡ್ಡ ‘ವಿಮಾನ ನಿಲ್ದಾಣ’.! ವೈಶಿಷ್ಟ್ಯಗಳು ತಿಳಿದ್ರೆ, ನೀವೇ ಅಚ್ಚರಿ ಪಡ್ತೀರಿ
ಕೋವಿಡ್ ಗುಣಮುಖ ಸುಳ್ಳು ಹೇಳಿಕೆ ಮೂಲಕ ‘ಬಾಬಾ ರಾಮದೇವ್’ ರೆಡ್ ಲೈನ್ ದಾಟಿದ್ದಾರೆ : IMA ಅಧ್ಯಕ್ಷ