ಪ್ರಯಾಗ್ ರಾಜ್ : ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಕುಟುಂಬ ಸಮೇತರಾಗಿ ತೆರಳಿ ಇಂದು ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ.
ಈ ಕುರಿತು ಮಾಹಿತಿ ಹಂಚಿಕೊಂಡಿರುವ ಅವರು, ವಿಶ್ವದ ಅತ್ಯಂತ ದೊಡ್ಡ ಧಾರ್ಮಿಕ, ಆಧ್ಯಾತ್ಮಿಕ ಉತ್ಸವ, ಹಿಂದೂ ಧರ್ಮದ ಒಂದು ಸಾಮೂಹಿಕ ತೀರ್ಥಯಾತ್ರೆಯಾಗಿ ಯಶಸ್ವಿಯಾಗಿ ಜರಗುತ್ತಿರುವ ಪ್ರಯಾಗರಾಜದ ಮಹಾಕುಂಭದಲ್ಲಿ ಇಂದು ಕುಟುಂಬ ಸಹಿತ ಪಾಲ್ಗೊಂಡು ಪವಿತ್ರ ಸ್ನಾನ ಮಾಡುವ ಸುವರ್ಣ ಅವಕಾಶ ನನ್ನದಾಯಿತು. ಇದು ನನಗೆ ಅತ್ಯಂತ ದೈವಿಕ ಕ್ಷಣ. ಮಹಾಕುಂಭ ಒಂದು ಆಧ್ಯಾತ್ಮಿಕ ಅನುಭವ. ಇಲ್ಲಿ ಪವಿತ್ರ ಸ್ನಾನ ಮಾಡುವುದು ನಮಗೆ ಅಲೌಕಿಕ ಶಕ್ತಿಗಳನ್ನು ಒಟ್ಟುಗೂಡಿಸುವ ಅವಕಾಶ. ಕುಂಬಮೇಳವು ಭವ್ಯವಾದ ಯಶಸ್ಸು, ನಂಬಿಕೆ ಮತ್ತು ಸಂಸ್ಕೃತಿಯ ಆಚರಣೆಯನ್ನಾಗಿದ್ದು ಈಗಾಗಲೇ ಕೋಟಿ ಕೋಟಿ ಜನರು ಈ ಪಾವನ ಉತ್ಸವದಲ್ಲಿ ಪಾಲ್ಗೊಂಡು ಪುನಿತರಾಗಿದ್ದಾರೆ. ಹರ ಹರ ಮಹಾದೇವ ಎಂದು ಹೇಳಿದ್ದಾರೆ.