ನವದೆಹಲಿ : 2030ರ ಕಾಮನ್‌ವೆಲ್ತ್ ಕ್ರೀಡಾಕೂಟವನ್ನ ಆಯೋಜಿಸಲು ಬಿಡ್ ಸಲ್ಲಿಸುವ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಪ್ರಸ್ತಾವನೆಯನ್ನ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ.
ಸಂಬಂಧಿತ ಸಚಿವಾಲಯಗಳು, ಇಲಾಖೆಗಳು ಮತ್ತು ಅಧಿಕಾರಿಗಳಿಂದ ಅಗತ್ಯವಾದ ಖಾತರಿಗಳ ಜೊತೆಗೆ, ಆತಿಥೇಯ ಸಹಯೋಗ ಒಪ್ಪಂದ (HCA)ಕ್ಕೆ ಸಹಿ ಹಾಕಲು ಮತ್ತು ಬಿಡ್ ಯಶಸ್ವಿಯಾದರೆ ಗುಜರಾತ್ ಸರ್ಕಾರಕ್ಕೆ ಅನುದಾನ ನೀಡಲು ಸಂಪುಟ ಅನುಮೋದನೆ ನೀಡಿದೆ.
ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ 72 ದೇಶಗಳ ಕ್ರೀಡಾಪಟುಗಳು ಸ್ಪರ್ಧಿಸಲಿದ್ದು, ಹಲವಾರು ಕ್ರೀಡಾಪಟುಗಳು, ತರಬೇತುದಾರರು, ತಾಂತ್ರಿಕ ಅಧಿಕಾರಿಗಳು, ಪ್ರವಾಸಿಗರು ಮತ್ತು ಮಾಧ್ಯಮ ಸಿಬ್ಬಂದಿ ಭಾರತಕ್ಕೆ ಬರುತ್ತಾರೆ. ಈ ಒಳಹರಿವು ಸ್ಥಳೀಯ ವ್ಯವಹಾರಗಳಿಗೆ ಪ್ರಯೋಜನವನ್ನ ನೀಡುತ್ತದೆ ಮತ್ತು ಆದಾಯವನ್ನ ಗಳಿಸುತ್ತದೆ.
2030ರ ಕಾಮನ್ವೆಲ್ತ್ ಕ್ರೀಡಾಕೂಟ ಎಲ್ಲಿ ನಡೆಸಲಾಗುವುದು?
ವಿಶ್ವ ದರ್ಜೆಯ ಕ್ರೀಡಾಂಗಣಗಳು, ಸುಧಾರಿತ ತರಬೇತಿ ಸೌಲಭ್ಯಗಳು ಮತ್ತು ರೋಮಾಂಚಕ ಕ್ರೀಡಾ ಸಂಸ್ಕೃತಿಯಿಂದಾಗಿ ಅಹಮದಾಬಾದ್’ನ್ನ ಆದರ್ಶ ಆತಿಥೇಯ ನಗರವೆಂದು ಕೇಂದ್ರ ಸಚಿವ ಸಂಪುಟವು ಹೈಲೈಟ್ ಮಾಡಿದೆ. ಜಾಗತಿಕವಾಗಿ ಅತಿದೊಡ್ಡ ಕ್ರೀಡಾಂಗಣವಾದ ನರೇಂದ್ರ ಮೋದಿ ಕ್ರೀಡಾಂಗಣವು 2023ರ ಐಸಿಸಿ ಕ್ರಿಕೆಟ್ ವಿಶ್ವಕಪ್ ಫೈನಲ್’ನ್ನು ಯಶಸ್ವಿಯಾಗಿ ಆಯೋಜಿಸುವ ಮೂಲಕ ತನ್ನ ಸಾಮರ್ಥ್ಯವನ್ನ ಸಾಬೀತುಪಡಿಸಿದೆ.
BREAKING : ಮಹಾರಾಷ್ಟ್ರ-ಛತ್ತೀಸ್ಗಢ ಗಡಿಯಲ್ಲಿ ಎನ್ಕೌಂಟರ್ ; ನಾಲ್ವರು ನಕ್ಸಲರು ಸಾವು
BREAKING : ಮಹಾರಾಷ್ಟ್ರ-ಛತ್ತೀಸ್ಗಢ ಗಡಿಯಲ್ಲಿ ಎನ್ಕೌಂಟರ್ ; ನಾಲ್ವರು ನಕ್ಸಲರು ಸಾವು
‘ರಾಜ್ಯ ಸರ್ಕಾರಿ ನೌಕರ’ರಿಗೆ ಮಹತ್ವದ ಮಾಹಿತಿ: ‘HRMS’ನಲ್ಲಿ ನೋಂದಾಯಿಸದಿದ್ದರೇ ‘ವೇತನ ತಡೆ’