ನವದೆಹಲಿ : ಉಕ್ರೇನ್ ಭಾರತದಿಂದ ಡೀಸೆಲ್ ಖರೀದಿಸುವುದನ್ನ ನಿಲ್ಲಿಸಲಿದೆ ಎಂದು ಉಕ್ರೇನ್’ನ ಇಂಧನ ಸಲಹಾ ಸಂಸ್ಥೆ ಎನ್‌ಕೋರ್ ಸೋಮವಾರ ಹೇಳಿದೆ. ಸಂಸ್ಥೆಯ ಪ್ರಕಾರ, ಅಕ್ಟೋಬರ್ 1ರಿಂದ ಉಕ್ರೇನ್ ಭಾರತದಿಂದ ಉತ್ಪಾದಿಸುವ ಡೀಸೆಲ್ ಇಂಧನ ಆಮದನ್ನ ನಿಷೇಧಿಸಲಿದೆ. ಅಂದ್ಹಾಗೆ, ಭಾರತವು ರಷ್ಯಾದಿಂದ ತೈಲವನ್ನ ಖರೀದಿಸುತ್ತಿರುವುದರಿಂದ ಈ ನಿಷೇಧ ವಿಧಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಎನ್‌ಕೋರ್ ಉಲ್ಲೇಖಿಸಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ಏಜೆನ್ಸಿಯ ಪ್ರಕಾರ, ಮತ್ತೊಂದು ಉಕ್ರೇನಿಯನ್ ಸಲಹಾ ಸಂಸ್ಥೆ A-95, ಈ ತಿಂಗಳ ಆರಂಭದಲ್ಲಿ ಉಕ್ರೇನಿಯನ್’ನ ಪ್ರಮುಖ ತೈಲ ಸಂಸ್ಕರಣಾಗಾರವನ್ನು ಈ ಬೇಸಿಗೆಯಲ್ಲಿ ಮುಚ್ಚಬೇಕಾಯಿತು ಎಂದು ಹೇಳಿತ್ತು.
ಸಂಸ್ಕರಣಾಗಾರ ಮುಚ್ಚಿದ ಕಾರಣ, ಉಕ್ರೇನಿಯನ್ ವ್ಯಾಪಾರಿಗಳು ಭಾರತದಿಂದ ಡೀಸೆಲ್ ಇಂಧನವನ್ನ ಆಮದು ಮಾಡಿಕೊಳ್ಳುವ ಮೂಲಕ ಸರಿದೂಗಿಸಬೇಕಾಯಿತು. ಉಕ್ರೇನಿಯನ್ ರಕ್ಷಣಾ ಸಚಿವಾಲಯವು ಸಹ ಭಾರತದಿಂದ ಇಂಧನವನ್ನ ಖರೀದಿಸಿದೆ ಏಕೆಂದರೆ ಅದರ ಗುಣಮಟ್ಟವು ತುಂಬಾ ಉತ್ತಮವಾಗಿದೆ ಎಂದು ಪರಿಗಣಿಸಲಾಗಿದೆ.
ರಷ್ಯಾ ಉಕ್ರೇನ್’ನ ತೈಲ ಸಂಸ್ಕರಣಾಗಾರಗಳು ಮತ್ತು ಇಂಧನ ಸಂಗ್ರಹಣಾ ಸೌಲಭ್ಯಗಳ ಮೇಲೆ ಡ್ರೋನ್’ಗಳು ಮತ್ತು ಕ್ಷಿಪಣಿಗಳ ಮೂಲಕ ದಾಳಿ ಮಾಡುತ್ತಿದೆ. ಇದರಿಂದಾಗಿ ಉಕ್ರೇನ್’ನ ಸಂಸ್ಕರಣಾಗಾರಗಳು ಮತ್ತು ತೈಲ ಸಂಗ್ರಹಣಾ ಸೌಲಭ್ಯಗಳಿಗೆ ಹಾನಿಯಾಗಿದೆ.
ಭಾರತದ ಡೀಸೆಲ್ ಬಗ್ಗೆ ತನಿಖೆ ನಡೆಸಲು ಉಕ್ರೇನ್ ನಿರ್ಧಾರ.!
ಭಾರತದಿಂದ ಖರೀದಿಸಿದ ಎಲ್ಲಾ ಡೀಸೆಲ್’ಗಳನ್ನು ಪರೀಕ್ಷಿಸಬೇಕೆಂದು ಉಕ್ರೇನಿಯನ್ ಭದ್ರತಾ ಸಂಸ್ಥೆಗಳು ಆದೇಶಿಸಿವೆ ಎಂದು ಎನ್‌ಕೋರ್ ಹೇಳುತ್ತದೆ. ಭಾರತೀಯ ಡೀಸೆಲ್‌ನಲ್ಲಿ ರಷ್ಯಾದ ಘಟಕಗಳಿವೆಯೇ ಎಂದು ಕಂಡುಹಿಡಿಯಲು ಪ್ರಯೋಗಾಲಯದಲ್ಲಿ ಪರೀಕ್ಷಿಸಬೇಕು ಎಂದು ಸಂಸ್ಥೆ ಹೇಳಿದೆ.
ಕನ್ನಡಕಕ್ಕೆ ಗುಡ್ ಬೈ ಹೇಳಿ ; ದೃಷ್ಟಿ ಮರಳಿಸುವ ‘ಐ ಡ್ರಾಪ್ಸ್’ ಅಭಿವೃದ್ಧಿ ಪಡಿಸಿದ ವಿಜ್ಞಾನಿಗಳು
ಕನ್ನಡಕಕ್ಕೆ ಗುಡ್ ಬೈ ಹೇಳಿ ; ದೃಷ್ಟಿ ಮರಳಿಸುವ ‘ಐ ಡ್ರಾಪ್ಸ್’ ಅಭಿವೃದ್ಧಿ ಪಡಿಸಿದ ವಿಜ್ಞಾನಿಗಳು
ಅಂತಾರಾಷ್ಟ್ರೀಯ ಮೆಕ್ಯಾನಿಕಲ್ ಎಂಜಿನಿಯರಿಂಗ್ ಕಾಂಗ್ರೆಸ್ ಮತ್ತು ಎಕ್ಸ್‌ಪೋಸಿಷನ್ ಇಂಡಿಯಾ ಸಮಾವೇಶ ಯಶಸ್ವಿ