ನವದೆಹಲಿ: ಉತ್ತರಾಖಂಡಕ್ಕೆ ಸಂಬಂಧಿಸಿದ ದೊಡ್ಡ ಸುದ್ದಿ ಹೊರಬಂದಿದ್ದು, ಯುಸಿಸಿಯನ್ನ ಶೀಘ್ರದಲ್ಲೇ ಉತ್ತರಾಖಂಡದಲ್ಲಿ ಜಾರಿಗೆ ತರಲಾಗುವುದು ಎಂದು ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ತಿಳಿಸಿದ್ದಾರೆ.
ಧಾಮಿ ಸರ್ಕಾರವು ಯುಸಿಸಿ ಮಸೂದೆಯನ್ನ ವಿಧಾನಸಭಾ ಅಧಿವೇಶನದಲ್ಲಿ ತರಲಿದ್ದು, ಸಮಿತಿಯು ಫೆಬ್ರವರಿ 2ರಂದು ಕರಡನ್ನ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಿದೆ. ಸಧ್ಯ ಈ ವಿಷಯದ ಬಗ್ಗೆ ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರ ಹೇಳಿಕೆಯೂ ಹೊರಬಂದಿದೆ. ಯುಸಿಸಿಯನ್ನ ಜಾರಿಗೆ ತರಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.