ಬೆಂಗಳೂರು : ಆನ್ ಲೈನ್ ಗೇಮ್ ಆಡುವವರೇ ಎಚ್ಚರ. ಬೆಂಗಳೂರಿನಲ್ಲಿ ಆನ್ ಲೈನ್ ಗೇಮ್ ಗೀಳಿಗೆ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಬೆಂಗಳೂರಿನ ವಿಜಯನಗರ ಮೂಲದ ಮಲ್ಲಿಕಾರ್ಜುನ್ (25) ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಖಾಸಗಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿದ್ದ ಮಲ್ಲಿಕಾರ್ಜುನ್ ಆನ್ ಲೈನ್ ಗೇಮ್ ಗೀಳಿಗೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ.
ಮಲ್ಲಿಕಾರ್ಜುನ್ ಕಳೆದ 4-5 ವರ್ಷಗಳಿಂದ ಾನ್ ಲೈನ್ ಗೇಮ್ ಆಡುತ್ತಿದ್ದ. ನಷ್ಟವಾದ್ರೂ ಮತ್ತೆ ಮತ್ತೆ ಹಣ ಹಾಕಿ ಸಾಲ ಮಾಡಿದ್ದ. ಸಂಬಂಧಿಕರು, ಪರಿಚಯಸ್ಥರಿಂದ ಸಾಲ ಮಾಡಿದ್ದ ಮಲ್ಲಿಕಾರ್ಜುನ್ ಪಿಜಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಹಾದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆನ್ ಲೈನ್ ಗೇಮ್ ಗೀಳಿಗೆ ಆಟೋ ಚಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು, ಬಳ್ಳಾರಿ ಮೂಲದ ವ್ಯಕ್ತಿ ಆನ್ ಲೈನ್ ಗೇಮ್ ನಿಂದ ಸಾಲ ಮಾಡಿದ್ದ ಎನ್ನಲಾಗಿದೆ. ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ.