ನವದೆಹಲಿ: ಆಗಸ್ಟ್ 17 ರಂದು ಗುರುಗ್ರಾಮದ ಸೆಕ್ಟರ್ 57 ರಲ್ಲಿರುವ ಯೂಟ್ಯೂಬರ್ ಮತ್ತು ಬಿಗ್ ಬಾಸ್ ಒಟಿಟಿ ವಿಜೇತ ಎಲ್ವಿಶ್ ಯಾದವ್ ಅವರ ಮನೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಭಾಗಿಯಾಗಿದ್ದ ಇಬ್ಬರು ಶೂಟರ್ಗಳನ್ನು ದೆಹಲಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಬಂಧಿತ ಶೂಟರ್ಗಳನ್ನು ಗೌರವ್ ಮತ್ತು ಆದಿತ್ಯ ಎಂದು ಗುರುತಿಸಲಾಗಿದ್ದು, ಇಬ್ಬರೂ ‘ಭಾವು ಗ್ಯಾಂಗ್’ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಕುಖ್ಯಾತ ಹಿಮಾಂಶು ಭಾವು ಗ್ಯಾಂಗ್ಗೆ ಸಂಪರ್ಕ ಹೊಂದಿದ್ದಾರೆ.
ಕ್ಷಿಪ್ರ ಕಾರ್ಯಾಚರಣೆಯ ನಂತರ ಆರೋಪಿಗಳನ್ನು ಶಹಾಬಾದ್ ಡೈರಿ ಪ್ರದೇಶದಿಂದ ಬಂಧಿಸಲಾಗಿದೆ