ನವದೆಹಲಿ : ಪಂಜಾಬ್ನ ಸಿರ್ಹಿಂದ್ ನ ಮಾಧೋಪುರ ಬಳಿ ಭಾನುವಾರ ಬೆಳಿಗ್ಗೆ ಎರಡು ಗೂಡ್ಸ್ ರೈಲುಗಳು ಡಿಕ್ಕಿ ಹೊಡೆದಿದ್ದು, ಇಬ್ಬರು ಲೋಕೋ ಪೈಲಟ್ಗಳು ಗಾಯಗೊಂಡಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ. ಗಾಯಗೊಂಡ ಪೈಲಟ್ಗಳನ್ನು ಶ್ರೀ ಫತೇಘರ್ ಸಾಹಿಬ್ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಿರ್ಹಿಂದ್ ರೈಲ್ವೆ ನಿಲ್ದಾಣದಲ್ಲಿ ಭಾನುವಾರ ಬೆಳಿಗ್ಗೆ ನಿಂತಿದ್ದ ಸರಕು ರೈಲಿಗೆ ಹಿಂದಿನಿಂದ ಮತ್ತೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಲೋಕೋ ಪೈಲಟ್ಗಳು ಗಾಯಗೊಂಡಿದ್ದಾರೆ” ಎಂದು ಸರ್ಕಾರಿ ರೈಲ್ವೆ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಡಿಕ್ಕಿಯಿಂದಾಗಿ ಅವುಗಳಲ್ಲಿ ಒಂದರ ಎಂಜಿನ್ ಮತ್ತೊಂದು ಹಳಿಗೆ ತಿರುಗಿ ಪ್ರಯಾಣಿಕರ ರೈಲಿಗೆ ಡಿಕ್ಕಿ ಹೊಡೆದಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ. ಗಾಯಗೊಂಡ ಲೋಕೋ ಪೈಲಟ್ ಗಳನ್ನು ವಿಕಾಸ್ ಕುಮಾರ್ ಮತ್ತು ಹಿಮಾಂಶು ಕುಮಾರ್ ಎಂದು ಗುರುತಿಸಲಾಗಿದೆ. ವಿಕಾಸ್ ಕುಮಾರ್ ಅವರ ತಲೆಗೆ ಮತ್ತು ಹಿಮಾಂಶು ಕುಮಾರ್ ಅವರ ಬೆನ್ನಿಗೆ ಗಾಯಗಳಾಗಿವೆ ಎಂದು ಫತೇಘರ್ ಸಾಹಿಬ್ ಸಿವಿಲ್ ಆಸ್ಪತ್ರೆಯ ವೈದ್ಯರು ಪಿಟಿಐಗೆ ತಿಳಿಸಿದ್ದಾರೆ. ಗಾಯಗೊಂಡವರನ್ನು ಪಟಿಯಾಲಾದ ರಾಜೀಂದ್ರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.