ಹೈದರಾಬಾದ್ : ನಟ ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’ ಸಿನಿಮಾದ ಫಂಕ್ಷನ್ ನಲ್ಲಿ ದುರಂತ ಸಂಭವಿಸಿದೆ. ‘ಗೇಮ್ ಚೇಂಜರ್’ ಕಾರ್ಯಕ್ರಮ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ಅಪಘಾತ ಸಂಭವಿಸಿ ಇಬ್ಬರು ಸಾವನ್ನಪ್ಪಿದ್ದಾರೆ.
ಈ ಘಟನೆ ಸ್ವಲ್ಪ ತಡವಾಗಿ ಬೆಳಕಿಗೆ ಬಂದಿದೆ. ರಾಜಾಜಿನಗರ ಬಳಿ ನಡೆದ ಘಟನೆಯಲ್ಲಿ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ. ಶನಿವಾರ ರಾಜಾಜಿನಗರದಲ್ಲಿ ನಡೆದ ‘ಗೇಮ್ ಚೇಂಜರ್’ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಕಾಕಿನಾಡದ ಅರವಪಲ್ಲಿ ಮಣಿಕಂಠ ಮತ್ತು ತೊಕಡ ಚರಣ್ ಎಂಬ ಇಬ್ಬರು ಯುವಕರು ತೆರಳಿದ್ದರು.
ಆದರೆ, ‘ಗೇಮ್ ಚೇಂಜರ್’ ಸಿನಿಮಾದ ಫಂಕ್ಷನ್ ಮುಗಿಸಿ ಕಾಕಿನಾಡ ಕಡೆಗೆ ಬರುತ್ತಿದ್ದಾಗ ಕಾರ್ಗಿಲ್ ಫ್ಯಾಕ್ಟರಿ ಬಳಿ ವ್ಯಾನ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ ಕಾಕಿನಾಡ ಮೂಲದ ಅರವಪಲ್ಲಿ ಮಣಿಕಂಠ ಹಾಗೂ ತೊಕಡ ಚರಣ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಣಿಕಂಠ ಸ್ಥಳದಲ್ಲೇ ಮೃತಪಟ್ಟರೆ, ಚರಣ್ ಕಾಕಿನಾಡ ಜಿಜಿಎಚ್ ತರುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.