ರಾಯಗಢ : ಮಹಾರಾಷ್ಟ್ರದ ರಾಯಗಢದ ರಾಸಾಯನಿಕ ಕಾರ್ಖಾನೆಯಲ್ಲಿ ಗುರುವಾರ ಭಾರೀ ಸ್ಫೋಟ ಸಂಭವಿಸಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಇನ್ನು ದುರಂತದಲ್ಲಿ ನಾಲ್ವರು ಗಾಯಗೊಂಡಿದ್ದಾರೆ.
ಸಧ್ಯ ಐದು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದ್ದು, ಬೆಂಕಿ ನಂದಿಸುವ ಪ್ರಯತ್ನಗಳು ನಡೆಯುತ್ತಿವೆ.
ಮುಂಬೈನಿಂದ ಸುಮಾರು 110 ಕಿ.ಮೀ ದೂರದಲ್ಲಿರುವ ರೋಹಾ ಪಟ್ಟಣದ ಧತವ್ ಎಂಐಡಿಸಿ ಪ್ರದೇಶದಲ್ಲಿರುವ ಸಾಧನಾ ನೈಟ್ರೋ ಚೆಮ್ ಲಿಮಿಟೆಡ್’ನಲ್ಲಿ ಬೆಳಿಗ್ಗೆ 11.15ಕ್ಕೆ ಈ ಘಟನೆ ನಡೆದಿದೆ.
ವರದಿಯ ಪ್ರಕಾರ, ಪೊಲೀಸ್ ವರಿಷ್ಠಾಧಿಕಾರಿ ಸೋಮನಾಥ್ ಘರ್ಗೆ, “ರಾಸಾಯನಿಕ ಸ್ಥಾವರದ ಶೇಖರಣಾ ಟ್ಯಾಂಕ್’ನಲ್ಲಿ ಸ್ಫೋಟ ಸಂಭವಿಸಿದೆ. ಶೇಖರಣಾ ಟ್ಯಾಂಕ್ನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಉದ್ಯೋಗಿಗಳು ಸಾವನ್ನಪ್ಪಿದ್ದಾರೆ ಮತ್ತು ಹತ್ತಿರದ ಇತರ ನಾಲ್ವರಿಗೆ ಸುಟ್ಟ ಗಾಯಗಳಾಗಿವೆ.
Good News : ಸಧ್ಯದಲ್ಲೇ ದೇಶಾದ್ಯಂತ ‘ಪೆಟ್ರೋಲ್, ಡೀಸೆಲ್’ ಬೆಲೆ ಇಳಿಕೆ ಸಾಧ್ಯತೆ : ಪೆಟ್ರೋಲಿಯಂ ಕಾರ್ಯದರ್ಶಿ
ಜಾಗತಿಕ ಬ್ಯಾಂಕುಗಳೊಂದಿಗೆ 8,400 ಕೋಟಿ ರೂ.ಗಳ ಸಾಲವನ್ನು ಮಾರಾಟ ಮಾಡಲು HDFC ಬ್ಯಾಂಕ್ ಮಾತುಕತೆ : ವರದಿ
BREAKING : ಪಶ್ಚಿಮ ದಂಡೆಯಲ್ಲಿ ಉದ್ವಿಗ್ನತೆ ನಡುವೆ ಭಾರತೀಯ ಮೂಲದ ಇಸ್ರೇಲಿ ‘ಸೈನಿಕ’ನ ಹತ್ಯೆ