ಬೆಂಗಳೂರು: ಇಲ್ಲಿನ ಆನೇಕಲ್ ನ ಪ್ರಸಿದ್ಧ ಐತಿಹಾಸಿಕ ಹುಸ್ಕೂರಿನ ಮದ್ದೂರಮ್ಮ ಜಾತ್ರೆಯಲ್ಲಿ ತೇರು ಉರುಳಿ ಬಿದ್ದು ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಬೆಂಗಳೂರಿನ ಆನೇಕಲ್ ಬಳಿಯ ಹುಸ್ಕೂರಿನ ಮದ್ದೂರಮ್ಮ ಜಾತ್ರೆ ತುಂಬಾನೇ ಪ್ರಸಿದ್ಧಿ. ನಿನ್ನೆ ತೇರು ಎಳೆಯುವಂತ ಸಂದರ್ಭದಲ್ಲಿ ಉರುಳಿ ಬಿದ್ದಿದೆ. ಇದರಿಂದಾಗಿ ಅದರ ಅಡಿಯಲ್ಲಿ ಸಿಲುಕಿ ಇಬ್ಬರು ಸಾವನ್ನಪ್ಪಿದ್ದಾರೆ. ಮೃತರನ್ನು ಹೊಸೂರು ಮೂಲದ ಲೋಹಿತ್ (24) ಹಾಗೂ ಬೆಂಗಳೂರಿನ ಕೆಂಗೇರಿ ಮೂಲದ ಜ್ಯೋತಿ (14) ಸಾವನ್ನಪ್ಪಿದ್ದಾರೆ. ಕುಟುಂಬದ ಜೊತೆಯಲ್ಲಿ ಸಮೋಸ್ ಮಾರಲು ಜ್ಯೋತಿ ಬಂದಿದ್ದಳು. ಗಾಯಗೊಂಡಿದ್ದ ನಾಲ್ವರು ಪೈಕಿ ಇಬ್ಬರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ರಾಯಸಂದ್ರದ ರಾಕೇಶ್ ಹಾಗೂ ಮತ್ತೋರ್ವ ಮಹಿಳೆಗೆ ಚಿಕಿತ್ಸೆ ಮುಂದುವರೆದಿದೆ.
ಇನ್ನೂ ಗಾಳಿ ಸಹಿತ ಮಳೆಯಿಂದಾಗಿ ಈ ಘಟನೆ ನಡೆದಿದೆ. ಅಂದಹಾಗೇ 150 ಅಡಿ ಎತ್ತರದ ಮದ್ದೂರಮ್ಮನ ತೇರು ಉರುಳಿ ಬಿದ್ದಿದ್ದು ಇದೇನೂ ಮೊದಲೇನು ಅಲ್ಲ. ಈ ಹಿಂದೆ ಕೆಲ ವರ್ಷಗಳ ಹಿಂದೆಯೂ ಇದೇ ರೀತಿಯಾಗಿತ್ತು. ಆದರೇ ಆಗ ಯಾವುದೇ ಸಾವು ನೋವು ಸಂಭವಿಸಿರಲಿಲ್ಲ.