ತುಮಕೂರು : ಕಲ್ಲು ಕ್ವಾರಿಯಲ್ಲಿ ಮದ್ದು ಸ್ಪೋಟಗೊಂಡು ಇಬ್ಬರು ವ್ಯಕ್ತಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಹೊಸಹಳ್ಳಿಯಲ್ಲಿ ನಡೆದಿದೆ.
ಹೊಸಹಳ್ಳಿ ಸಮೀಪದ ಕಲ್ಲು ಕ್ವಾರಿಯಲ್ಲಿ ಮದ್ದು ಇಟ್ಟು ಸ್ಪೋಟಿಸಲು ನಿರ್ಧರಿಸಲಾಗಿತ್ತು. ಅದರೆ ಮದ್ದು ಸ್ಪೋಟಗೊಳ್ಳದ ಕಾರಣ ನಿಷ್ಕ್ರಿಯ ಮಾಡಲು ಹೋದಾಗ ಮದ್ದು ಸ್ಪೋಟಗೊಂಡಿದೆ. ಘಟನೆಯಲ್ಲಿ ಇಬ್ಬರಿಗೆ ಗಂಭೀರವಾಗಿ ಗಾಯವಾಗಿದೆ.
ಮದ್ದು ಸ್ಪೋಟದಿಂದ ಗಾಯಗೊಂಡವರನ್ನು ಮಂಜುನಾಥ್, ಕೋಟಪ್ಪ ಎಂದು ಗುರುತಿಸಲಾಗಿದ್ದು, ಅವರನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಧುಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.